ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದೇಶಗಳಲ್ಲಿ ಭಾರತೀಯರಿಗೆ ಹೆಚ್ಚು ಅವಕಾಶ: ಸೆಲ್ವರಾಜ್

Rashmi Kasaragodu
Updated On : 26 Mar 2013, 11:01 am

ಬಳ್ಳಾರಿ: ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಇತರೆ ಉದ್ಯೋಗಗಳಲ್ಲಿ ಭಾರತೀಯರೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿಪ್ರೊ ಟೆಕ್ನಾಲಾಜಿಸ್ ಗ್ಲೋಬಲ್ ಹೆಡ್ ಅರಿವರಸು ಸೆಲ್ವರಾಜ್ ಅವರು ತಿಳಿಸಿದರು.
ಬಳ್ಳಾರಿ ಇನ್.ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್.ಮೆಂಟ್ ಕಾಲೇಜಿನ 16ನೇ ವಾರ್ಷಿಕೋತ್ಸವ ತರಂಗ್-2013 ಮತ್ತು ಎಂಬಿಎ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಅತಿಹೆಚ್ಚು ವೃತ್ತಿ ಕಂಡುಕೊಂಡವರು ಭಾರತೀಯರಾಗಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆಯು ಇತರೆ ದೇಶಗಳಿಗಿಂತ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ರವಿ ಗೆಟಗೇರಿ ಅವರು ಮಾತನಾಡಿ, ಸ್ಪಾರ್ಧಾತ್ಮಕ ಯುಗದಲ್ಲಿ ಸೂಕ್ತ ರೀತಿಯಲ್ಲಿ ಸ್ಪರ್ಧೆಯೊಡ್ಡಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಗತ್ಯವಾದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ತಮ್ಮ ಪ್ರತಿಭೆಗಳನ್ನು ಹೊರಸೂಸುವ ನೈಪುಣ್ಯತೆ, ನಿರ್ಭಯತೆಯನ್ನು ಪಡೆದುಕೊಳ್ಳಬೇಕು. ವಿದ್ಯಾಭ್ಯಾಸದೊಂದಿಗೆ ಅಗತ್ಯವಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಇದರಿಂದಾಗಿ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.
ಟಿಇಎಚ್.ಆರ್.ಡಿ ಟ್ರಸ್ಟ್.ನ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್, ಟ್ರಸ್ಟಿ ಎಸ್.ಬಿ. ಅಶೋಕ್ ಭೂಪಾಲ್ ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಡಾ. ಯಶ್ವಂತ್ ಭೂಪಾಲ್ ಅಧ್ಯಕ್ಷತೆ ವಹಿಸಿ ಬಿಐಟಿಎಂ ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು. 2011-12ನೇ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮತ್ತು ಕ್ರೀಡಾಕೂಟಗಳಲ್ಲಿ ವಿಜೇತರಾದ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಪ್ರದಾನ ಮಾಡಲಾಯಿತು.
ಬಿಐಟಿಎಂ ಉಪನಿರ್ದೇಶಕ ಪ್ರೊ. ವೈ.ಜೆ. ಪೃಥ್ವಿರಾಜ್ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಎಸ್. ಮಂಜುನಾಥ ನಿರೂಪಿಸಿ, ಪ್ರಾಚಾರ್ಯ ಡಾ. ಯು. ಈರಣ್ಣ ವಂದಿಸಿದರು. ನಂತರ ವಿದ್ಯಾರ್ಥಿನಿಯರಿಂದ ಸಾಮಾಜಿಕ ಸಮಸ್ಯೆ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement