ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಭ್ರಮದ ಒಪ್ಪತ್ತೇಶ್ವರ ರಥೋತ್ಸವ

Rashmi Kasaragodu
Updated On : 26 Mar 2013, 11:00 am

ಹೊಸಪೇಟೆ: ತಾಲೂಕಿನ ಗರಗ ನಾಗಲಾಪುರ ಗ್ರಾಮದ ಮಹಾಶಿವಯೋಗಿ ಗುರು ಒಪ್ಪತ್ತೇಶ್ವರ ಮಹಾಸ್ವಾಮಿ ರಥೋತ್ಸವವು ಶುಕ್ರವಾರ ಸಂಜೆ ಶ್ರದ್ಧಾ ಭಕ್ತಿಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಒಪ್ಪತ್ತೇಶ್ವರ ಸ್ವಾಮಿ ಮಠದಲ್ಲಿ ಸ್ವಾಮಿಗೆ ಬೆಳಗ್ಗೆ ಮಹಾರುದ್ರಾಭಿಷೇಕ, ಷಟ್.ಸ್ಥಳ ಧ್ವಜಾರೋಹಣ, ವಿಶೇಷ ಅಲಂಕಾರ, ಪೂಜೆಗಳು ನೆರವೇರಿದವು. ರಥೋತ್ಸವದಂದು ಬೆಳಗ್ಗೆಯಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ರಥೋತ್ಸವದಲ್ಲಿ ಮರಿಯಮ್ಮನಹಳ್ಳಿ, ಹೊಸಪೇಟೆ, ಬಳ್ಳಾರಿ, ಗರಗ, ಬ್ಯಾಲಕುಂದಿ, ಗೊಲ್ಲರಹಳ್ಳಿ, ಗುಂಡಾ, ಡಣಾಯಕನಕೆರೆ, ಚಿಲಕನಹಟ್ಟಿ, ತಿಮ್ಮಲಾಪುರ, ನಾಗಲಾಪುರ ತಾಂಡ ಸೇರಿದಂತೆ ಇತರೆ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಸಂಜೆ ಮಠದ ಶ್ರೀ ಮರಿಮಹಾಂತ ಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಕೊಟ್ಟೂರು ಮಠದ ಸಂಗನಬಸವ ಸ್ವಾಮಿಗಳು, ವಳಬಳ್ಳಾರಿಯ ಸಿದ್ದಲಿಂಗ ಮಹಾಸ್ವಾಮಿಗಳು, ಮರಿಯಮ್ಮನಹಳ್ಳಿಯ ಗುರುಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ನಂದಿಪುರದ ಮಹೇಶ್ವರ ಸ್ವಾಮೀಜಿ, ಹಡಗಲಿಯ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮಿಗಳು ರಥೋತ್ಸವದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement