ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನೀರಿನ ಸಮಸ್ಯೆಗೆ ಅಡ್ಡಿಯಾದ ನೀತಿ ಸಂಹಿತೆ

Rashmi Kasaragodu
Updated On : 27 Mar 2013, 10:56 am

ಮುನಿರಾಬಾದ್: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರೈತರ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ತುಂಗಭದ್ರಾ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಮಲ್ಲಿಕಾರ್ಜುನ ನಿರಾಕರಿಸಿದರು.
ಬಳ್ಳಾರಿ, ಸಿರುಗುಪ್ಪಾ ಹಾಗೂ ಕಂಪ್ಲಿ ಭಾಗದ ಸುಮಾರು 300ಕ್ಕೂ ಅಧಿಕ ರೈತರು ಮಂಗಳವಾರ ಕಂಪ್ಲಿ ಶಾಸಕ ಸುರೇಶ ಬಾಬು ನೇತೃತ್ವದಲ್ಲಿ ಇಲ್ಲಿನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚರ್ಚೆಗೆ ನಿರಾಕರಿಸಿದ ಮಲ್ಲಿಕಾರ್ಜುನ ಮನವಿ ಸಲ್ಲಿಸಲು ಸೂಚಿಸಿದರು.
ಮನವಿ: ಈ ಹಿನ್ನೆಲೆಯಲ್ಲಿ ರೈತರು ಏಪ್ರಿಲ್ 10ರ ವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಹರಿಸಲು ಮನವಿ ಮಾಡಿದರು.
ರೈತರು ಪಕ್ಷಾತೀತವಾಗಿ ಬಂದಿದ್ದರೆ ಅವರೊಂದಿಗೆ ಚರ್ಚಿಸುತ್ತಿದ್ದೆ. ಆದರೆ, ಅವರೊಂದಿಗೆ ಶಾಸಕರು ಬಂದ ಹಿನ್ನೆಲೆಯಲ್ಲಿ ಚರ್ಚಿಸಲಿಲ್ಲ ಎಂದು ಮುಖ್ಯ ಅಭಿಯಂತರ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.    
ಇದೇ ವೇಳೆ, ಮಾತನಾಡಿದ ಕಂಪ್ಲಿ ಶಾಸಕ ಸುರೇಶ ಬಾಬು, ಏ. 10ರ ವರೆಗೆ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement