ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಸಮರ್ಪಕ ಪಡಿತರ ವಿತರಣೆ: ಗ್ರಾಹಕರಿಂದ ಸೊಸೈಟಿಗೆ ಬೀಗ

Rashmi Kasaragodu
Updated On : 28 Mar 2013, 10:45 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 27
ಪಡಿತರ ಚೀಟಿಗಳಿಗೆ ಅಸಮರ್ಪಕ ಆಹಾರ ಧಾನ್ಯ ವಿತರಣೆ ವಿರೋಧಿಸಿ ಪಟ್ಟಣದ ಪುಟ್ಟಪ್ಪನ ಸೊಸೈಟಿಗೆ ಪಟ್ಟಣದ ಗ್ರಾಹಕರ ಬೀಗ ಹಾಕಿ ಬುಧವಾರ ಪ್ರತಿಭಟನೆ ಮಾಡಿದರು.
ಬೆಳಗ್ಗೆಯಿಂದಲೇ ಕೆಲವು ಗ್ರಾಹಕರು ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಅನ್ನ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಗ್ರಾಹಕರು ಸರ್ಕಾರದ ನಿಯಮದ ಪ್ರಕಾರ ಯೂನಿಟ್ ಪದ್ಧತಿಯಂತೆ ವಿತರಣೆ ಮಾಡಬೇಕು ಎಂದು ಪಟ್ಟು ಹಿಡಿದರು.
ರೈತ ಮುಖಂಡ ಐಗಾರ ಅಂಬಣ್ಣ ಮಾತನಾಡಿ, ಸರ್ಕಾರದ ನಿಯಮದ ಪ್ರಕಾರ ಯೂನಿಟ್ ಪದ್ಧತಿ ಅನುಸರಿಸಬೇಕು. ಆದರೆ ಅಧಿಕಾರಿಗಳು ಗ್ರಾಹಕರನ್ನು ದಾರಿ ತಪ್ಪಿಸುವ ಮೂಲಕ ಎಲ್ಲರಿಗೂ ಸಮನಾಗಿ 13 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಅದನ್ನು ವಿರೋಧಿಸಿ ಸೊಸೈಟಿಗೆ ಬೀಗ ಹಾಕಿದ್ದೇವೆ ಎಂದು ಹೇಳಿದರು. ಬಿಪಿಎಲ್, ಅನ್ನ ಅಂತ್ಯೋದಯ ಹಾಗೂ ಪಡಿತರ ಚೀಟಿ ಇಲ್ಲದವರ ಮಧ್ಯೆ ಗೊಂದಲ ಉಂಟಾಗಿ ಸೊಸೈಟಿಗೆ ಬೀಗ ಹಾಕಿದ್ದಾರೆ. ಎಲ್ಲರೂ ಸಮನಾಗಿ 13 ಕೆಜಿ ಅಕ್ಕಿ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಇನ್ನು ಕೆಲವರಿಗೆ ಪಡಿತರ ಚೀಟಿ ವಿತರಣೆ ಮಾಡಬೇಕಿದೆ, ಅವರಿಗೂ ಪಡಿತರ ಆಹಾರ ಧಾನ್ಯ ವಿತರಣೆ ಮಾಡಬೇಕಿದೆ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿ ಗಲಾಟೆಗೆ ಕಾರಣವಾಗಿದೆ.
ಗುಮಾಸ್ತ ವೀರಣ್ಣ ಈ ಕುರಿತು ಪ್ರತಿಕ್ರಿಯಿಸಿ, ಸೊಸೈಟಿ ವ್ಯಾಪ್ತಿಯ 1,365 ಪಡಿತರ ಚೀಟಿಗಳಿಗೆ 1,085 ಕೆಜಿ ಸಕ್ಕರೆ ಬಂದಿದೆ. ಈ ಎಲ್ಲ ಗ್ರಾಹಕರಿಗೆ 1 ಕೆಜಿ ಸಕ್ಕರೆ ಯಾವ ರೀತಿ ವಿತರಣೆ ಮಾಡಬೇಕು? ಸರ್ಕಾರದ ಯೂನಿಟ್ ಪದ್ಧತಿಯಂತೆ ಇದನ್ನು ವಿತರಣೆ ಮಾಡಲು ಅಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement