ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಧ್ಯಮ ದೃಢೀಕರಣ ಮೇಲುಸ್ತುವಾರಿ ಸಮಿತಿ

Rashmi Kasaragodu
Updated On : 29 Mar 2013, 12:43 pm

ಬಳ್ಳಾರಿ: ಜಿಲ್ಲೆಯಲ್ಲಿ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆಯನ್ನು ಅನುಸರಿಸಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಮತದಾನ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮಾಧ್ಯಮ ದೃಢೀಕರಣ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ ಮತ್ತು ವರದಿಗಾರರಾದ ಶಿವಕುಮಾರ್ ಮಾಳಗಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಜಾಹೀರಾತುಗಳ ತುಣುಕುಗಳನ್ನು ಸಂಗ್ರಹಿಸಿ ಅದರ ವೆಚ್ಚವನ್ನು ದೃಢೀಕರಿಸಿ ವರದಿ ನೀಡಬೇಕು. ಸಮಿತಿಯ ಅಧ್ಯಕ್ಷರಿಂದ ಅನುಮತಿ ಪಡೆದ ಜಾಹೀರಾತುಗಳನ್ನು ಪ್ರಕಟಿಸಿ ವೆಚ್ಚದ ವಿವರವನ್ನು ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಬೇಕು. ಯಾವುದೇ ಪತ್ರಿಕೆಗಳಲ್ಲಿ ಪೇಯ್ಡ್ ನ್ಯೂಸ್ಗಳು ಪ್ರಕಟವಾದರೆ ಅಂತಹ ವರದಿ ಹಾಗೂ ವೆಚ್ಚದ ವಿವರವನ್ನು ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕು. ಯಾವುದೇ ಕರಪತ್ರ, ಪೋಸ್ಟರ್ಗಳನ್ನು ಮುದ್ರಿಸುವ ಮುನ್ನ ಮುದ್ರಿಸಿದವರ ಹಾಗೂ ಪ್ರಕಟಿಸಿದವರ ಹೆಸರು ಮತ್ತು ವಿಳಾಸವನ್ನು ಮುದ್ರಿಸಿ ದೃಢೀಕರಣವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು. ಉಲ್ಲಂಘಿಸಿದರೆ 6 ತಿಂಗಳ ಸೆರೆವಾಸ ಅಥವಾ  ರು. 2 ಸಾವಿರ ದಂಡವನ್ನು ವಿಧಿಸಲಾಗುವುದು. ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ ಈ ಕುರಿತು ವಿವರಿಸಬೇಕು ಎಂದು ಅವರು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement