ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆದರ್ಶ ವ್ಯಕ್ತಿಗಳ ಗುಣ ಅಳವಡಿಸಿಕೊಳ್ಳಿ

Vishwanath S
Updated On : 30 Mar 2013, 11:01 am

ಕೊಟ್ಟೂರು: ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಯುವ ಜನಾಂಗ ಬದಲಾವಣೆಯಾದಲ್ಲಿ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ಶಿಕ್ಷಕಿ ಎಸ್.ಎಂ. ನಳಿನಿ ಹೇಳಿದರು.
ಕೊಟ್ಟೂರಿನಲ್ಲಿ ಶ್ರೀ ಕೊಟ್ಟೂರೇಶ್ವರ ಐಟಿಐ ಕಾಲೇಜು ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸಮಾಜ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ' ಕುರಿತು ಅವರು ಮಾತನಾಡಿದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು. ನಿರಂತರ ಅಧ್ಯಯನ ರೂಢಿಸಿಕೊಂಡು ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಉಪನ್ಯಾಸಕ ಬಸವನಗೌಡ ಮಾತನಾಡಿ, ವಿವಿಧ ಬೆಳೆಗಳಿಗಿಂತ ರೇಷ್ಮೆ ಬೆಳೆ ರೈತರಿಗೆ ಅಧಿಕ ಲಾಭ ತಂದುಕೊಡಬಲ್ಲದು. ಸರ್ಕಾರದ ಸಹಾಯಧನ ಪಡೆದು, ರೇಷ್ಮೆ ಕೃಷಿ ಮಾಡಿ, ಆರ್ಥಿಕ ಸದೃಢರಾಗಿ ಎಂದು ಹೇಳಿದರು.
ದಾನಿಗಳಾದ ಜಿ. ಉಮೇಶ್, ಕಲಾವತಿ ವೀರಭದ್ರಯ್ಯ ದತ್ತಿ ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದೇವರಮನಿ ಕೊಟ್ರೇಶಿ ಕಾರ್ಯಕ್ರಮ ಉದ್ಘಾಟಿಸಿದರು. ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಸಣ್ಣಕೊಟ್ರಯ್ಯ, ಟಿ.ಎಂ. ಶಿವಪ್ರಕಾಶ್ ಕೂಡ್ಲಿಗಿ ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೆ.ಜಿ. ಸಿದ್ದಲಿಂಗರಾಜು ಸ್ವಾಗತಿಸಿದರು. ಕೆ. ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು. ಹಳ್ಳಿ ಮಲ್ಲಿಕಾರ್ಜುನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement