ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮನೆಗೆ ಕನ್ನ: ರು. 4.55 ಲಕ್ಷ ಕಳ್ಳತನ

Vishwanath S
Updated On : 5 May 2013, 11:29 am

ಹೊಸಪೇಟೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲಿನ ಬೋಲ್ಟ್ ತೆಗೆದು ಮನೆಯೊಳಗೆ ನುಗ್ಗಿ ಸುಮಾರು ರು. 4.55 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ನಗರದ ಬಸವೇಶ್ವರ ಬಡಾವಣೆಯಲ್ಲಿ ಶನಿವಾರ ನಡೆದಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ಗುಜ್ಜಲ್ ರಘು ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಘು ಸಹೋದರ ಗುಜ್ಜಲ್ ನಾಗರಾಜ್ ಸ್ಪರ್ಧಿಸಿರುವುದರಿಂದ ನಾಗರಾಜ್ ಪರ ಪ್ರಚಾರಕ್ಕೆಂದು ಕಂಪ್ಲಿಗೆ ಹೋದಾಗ ಈ ಘಟನೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಿಟಕಿಯಲ್ಲಿ ಕೈ ಹಾಕಿ ಬಾಗಿಲಿನ ಬೋಲ್ಟ್ ತೆಗೆದು ಮನೆಯೊಳ್ಳಕ್ಕೆ ನುಗ್ಗಿ, ಬೆಡ್‌ರೂಂನ ಬೀಗ ಹಾಗೂ ಮನೆಯಲ್ಲಿನ ಮೂರು ಬಿರೂಗಳ ಬೀಗ ಮುರಿದಿದ್ದಾರೆ.
ಬಿರೂವಿನಲ್ಲಿದ್ದ ರು. 2 ಲಕ್ಷ ನಗದು, ರು. 1.92 ಲಕ್ಷ ಮೌಲ್ಯದ ಚಿನ್ನಾಭರಣಗಳಾದ ಬಂಗಾರದ ನೆಕ್ಲೆಸ್, ಸರ, 2 ಬಳೆ, 500 ಗ್ರಾಂ ಬೆಳ್ಳಿ ಆರಂಭಗಳು ಮತ್ತು ರು. 50 ಸಾವಿರ ಮೌಲ್ಯದ 2 ಮೊಬೈಲ್, ರು. 20 ಸಾವಿರ ಮೌಲ್ಯದ 2 ವಾಚ್ ಸೇರಿದಂತೆ ಒಟ್ಟು ರು. 4.55 ಲಕ್ಷ ಮೌಲ್ಯದ ಬಂಗಾರ ಮತ್ತು ಹಣ ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement