ಸುರೇಶಬಾಬು ಗೆಲವಿಗೆ ಪೂಜೆ
ಕಂಪ್ಲಿ: ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಟಿ.ಎಚ್. ಸುರೇಶಬಾಬು ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಬೇಕೆಂದು ಸಂಕಲ್ಪಿಸಿ, ಪುರಸಭೆ ಸದಸ್ಯ ಎನ್. ರಾಮಾಂಜನೇಯಲು 12ನೇ ವಾರ್ಡ್ನಲ್ಲಿ ಬರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 101 ತೆಂಗಿನಕಾಯಿಗಳನ್ನು ಸಮರ್ಪಿಸಿದರು. ಬಿಎಸ್ಆರ್ ಕಾಂಗ್ರೆಸ್ ಮುಖಂಡ ಡಾ. ವೆಂಕಟೇಶ, ರಮೇಶ, ಶಿವಕುಮಾರ, ಲಿಂಗಪ್ಪ, ಶಿಕಾರಿ ಗಂಗಪ್ಪ, ನಾಗರಾಜ, ಕೃಷ್ಣ, ಗಿರಿಯಪ್ಪ, ಚಿತ್ರಗಾರ್ ಲಿಂಗಪ್ಪ, ವಿ. ವಿರೂಪಣ್ಣ, ಉಪ್ಪಿರಾಜ ರಂಗಸ್ವಾಮಿ, ಪಿ. ಶಂಕ್ರಪ್ಪ, ರುದ್ರೇಶ, ವೆಂಕಟೇಶ ಶೆಟ್ಟಿ ಇತರರು ಇದ್ದರು.