ಆನಂದಸಿಂಗ್ ಮತದಾರರ ಜತೆ ಫಲಿತಾಂಶ ವೀಕ್ಷಣೆ
ಹೊಸಪೇಟೆ: ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು ಮತದಾರರೊಂದಿಗೆ ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ವೀಕ್ಷಿಸುವುದಾಗಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಅತ್ಯಂತ ಕುತೂಹಲಕಾರಿ ಆಗಿರುವುದರಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ದೊಡ್ಡದಾದ ಎಲ್‌ಸಿಡಿ ಟಿವಿಯನ್ನು ಅಳವಡಿಸಲಾಗಿದೆ. ಮತದಾರರೊಂದಿಗೆ ಅಲ್ಲಿ ಫಲಿತಾಂಶ ವೀಕ್ಷಿಸಿ, ಸೋಲು-ಗೆಲವನ್ನು ಸಮಚಿತ್ತವಾಗಿ ತೆಗೆದುಕೊಳ್ಳುವೆ ಎಂದರು. ಸಿಂಗ್ ಅವರ ಹೇಳಿಕೆಯಿಂದ ಮುನ್ಸಿಪಲ್ ಮೈದಾನದಲ್ಲಿ ಸಾವಿರಾರು ಜನರು ಎಲ್‌ಸಿಡಿ ಟಿವಿಯಲ್ಲಿ ಫಲಿತಾಂಶ ವೀಕ್ಷಣೆಗೆ ಸಜ್ಜಾಗಿದ್ದಾರೆ.