ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲಾಡ್, ಘೋರ್ಪಡೆ ಕುಟುಂಬದ್ದೇ ಪಾರುಪತ್ಯ

Mainashree
Updated On : 8 May 2013, 9:55 am

ಬಳ್ಳಾರಿ: ಸಂಡೂರಿನಲ್ಲಿ ಘೋರ್ಪಡೆ ಮತ್ತು ಲಾಡ್ ಕುಟುಂಬದವರ ಕೃಪಾಕಟಾಕ್ಷ ಈ ಬಾರಿಯೂ ಕೆಲಸ ಮಾಡಿದೆ. 1959ರಿಂದ ಇಲ್ಲಿಯವರೆಗೆ ಈ ಎರಡು ಕುಟುಂಬದ ಬೆಂಬಲ ಇರುವ ಅಥವಾ ಆ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳೇ ಗೆಲವು ಸಾಧಿಸುವುದು ಕ್ಷೇತ್ರದ ವಿಶೇಷ.ಈ ಬಾರಿ ಸಂತೋಷ್ ಲಾಡ್ ಅವರ ಬೆಂಬಲಿತ ಅಭ್ಯರ್ಥಿ ಕಾಂಗ್ರೆಸ್‌ನ ಈ. ತುಕಾರಾಂ ಗೆಲವು ಸಾಧಿಸುವ ಕ್ಷೇತ್ರದ ಇತಿಹಾಸವನ್ನು ಮುಂದುವರಿಸಿದ್ದಾರೆ. 2008ರಲ್ಲೇ ಸಂತೋಷ್ ಲಾಡ್ ಮೂಲಕ ಗೆಲವು ಸಾಧಿಸಿದ್ದ ತುಕಾರಾಂ, ಈ ಬಾರಿಯೂ ಗೆದ್ದಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಇಲ್ಲಿಯವರೆಗೆ 14 ಬಾರಿ ಚುನಾವಣೆಗಳು ನಡೆದಿದ್ದು, ಅದರಲ್ಲಿ 13 ಬಾರಿ ಘೋರ್ಪಡೆ ಹಾಗೂ ಲಾಡ್ ಕುಟುಂಬದವರು ಹಾಗೂ ಅವರ ಬೆಂಬಲಿತರೇ ಗೆಲವು ಸಾಧಿಸಿದ್ದಾರೆ. 1985ರಲ್ಲಿ ಸಿಪಿಐನ ಭೂಪತಿ ಘೋರ್ಪಡೆ ಅವರ ಆಂತರಿಕ ಬೆಂಬಲದಿಂದ ಗೆಲವು ಸಾಧಿಸಿದ್ದರೆ, 1978ರಲ್ಲಿ ಕಾಂಗ್ರೆಸ್‌ನಿಂದ ಸಿ. ರುದ್ರಪ್ಪ ಅವರು ಘೋರ್ಪಡೆ ಅವರ ಬೆಂಬಲದಿಂದಲೇ ಗೆದ್ದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement