ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೂರು ಮಕ್ಕಳ ಹೆತ್ತಳಾ ತಾಯಿ!

Rashmi Kasaragodu
Updated On : 10 May 2013, 1:21 am

ಕೂಡ್ಲಿಗಿ: ತಾಲೂಕಿನ ಗಜಾಪುರ ಸಮೀಪದ ಅಕ್ಕಾಪುರ ಗ್ರಾಮದ ರಂಗಪ್ಪ ಎಂಬುವರ ಪತ್ನಿ ನಾಗರತ್ನಾ ಗುರುವಾರ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗುರುವಾರ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಾಗ ಅವರನ್ನು 108 ಆ್ಯಂಬುಲೆನ್ಸ್ ಮೂಲಕ ಕೂಡ್ಲಿಗಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಒಂದು ಮಗುವಿನ ಹೆರಿಗೆಯಾಗಿದೆ. ಆನಂತರ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳನ್ನು ಹೆತ್ತಿದ್ದಾರೆ. ತಾಯಿ, ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆರೈಕೆ ಮಾಡುತ್ತಿರುವ ವೈದ್ಯರು ಮತ್ತು ಶುಶ್ರೂಷಕಿಯರು ತಿಳಿಸಿದ್ದಾರೆ. ಜನತೆ ಬಾಣಂತಿ ಹಾಗೂ ಮಕ್ಕಳನ್ನು ನೋಡಲು ಕುತೂಹಲದಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದುದು ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement