ಬುಲ್ಬುಲ್ ಚಿತ್ರ ಬಿಡುಗಡೆ: ಮೆರವಣಿಗೆ
ಕೊಪ್ಪಳ: ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರೆಬೆಲ್ಸ್ಟಾರ್ ಅಂಬರೀಶ ಅಭಿನಯದ ಹೊಸ ಬುಲ್ಬುಲ್ ಚಿತ್ರವು ಶುಕ್ರವಾರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ದರ್ಶನ್ ಅಭಿಮಾನಿಗಳು ದರ್ಶನ ಭಾವಚಿತ್ರ ಮೆರವಣಿಗೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಗ್ರಾಮೀಣ ಅಭಿಮಾನಿಗಳು ಶೋ ಮಾಡುವ ಮೂಲಕ ಯುವಕರ ದಂಡು ಬೆಳಿಗ್ಗೆಯಿಂದ ಚಿತ್ರಮಂದಿರದ ಆವರಣದಲ್ಲಿ ಬಿಡುಬಿಟ್ಟಿತ್ತು.
ಮೆರವಣಿಗೆ: ಬುಲ್ ಬುಲ್ ಚಿತ್ರ ಬಿಡುಗಡೆಗೂ ಮುನ್ನ ತಾಲೂಕಿನ ಕುಣಕೇರಿ ತಾಂಡದ ದರ್ಶನ್ ಅಭಿಮಾನಿಗಳ ಬಳಗ, ನಗರದ ಪ್ರಮುಖ ಬೀದಿಗಳಲ್ಲಿ ದರ್ಶನ್ ಭಾವಚಿತ್ರದ ಭವ್ಯ ಮೆರೆವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿತು. ಸುರೇಶ ಮಾಳಗಿ, ವೆಂಕಟೇಶ ಬಾಳನಗೌಡ್ರ, ಉಮೇಶ ಬಡಗಿ ಹಾಗೂ ಚನ್ನಪ್ಪ ನೇತೃತ್ವದ ತಂಡ ಭವ್ಯ ಮೆರವಣಿಗೆಯನ್ನು ಲಕ್ಷ್ಮೀ ಚಿತ್ರಮಂದಿರದ ಮಾಲೀಕರಾದ ವೀರೇಶ ಮಾಹಾಂತಯ್ಯನಮಠ ಸ್ವಾಗತಿಸಿದರು.