ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸವ ಜಯಂತಿ ಶತಮಾನೋತ್ಸವ, ಸಾಮೂಹಿಕ ವಿವಾಹ ಇಂದು

Vishwanath S
Updated On : 13 May 2013, 11:06 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 12
ಬಸವ ಜಯಂತಿ ಶತಮಾನೋತ್ಸವ ಹಾಗೂ 40ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಮೇ 13ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುವ ಬಸವ ಜಯಂತಿ ಸಮಾರಂಭದಲ್ಲಿ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿಗಳು ಪಟಸ್ಥಲ ಧ್ವಜಾರೋಹಣ ನೆರವೇರಿಸುವರು. ಅನಂತರ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಪೌಷ್ಟಿಕಾಂಶ ಕೊರತೆಯಿರುವ ಕಿರಿಯ ಪ್ರಾಥಮಿಕ ಶಾಲೆಯ 500 ವಿದ್ಯಾರ್ಥಿಗಳಿಗೆ ಬಸವ ಟಾನಿಕ್ ವಿತರಿಸಲಾಗುತ್ತದೆ. ಅನಂತರ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 30 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಬಿ.ಎಸ್. ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಸಹಾಯಕ ಆಯುಕ್ತ ಡಾ. ಡಿ.ಆರ್. ಅಶೋಕ್, ಬಾಗಲಕೋಟೆ ಆಯುಷ್ ಅಧಿಕಾರಿ ಡಾ. ಸಂಗಮೇಶ್ ಕಲಹಾಳ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಗೌಡ ಗುತ್ತಿಗನೂರು, ಬುಡಾ ಮಾಜಿ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೊಟ್ರೇಶ್, ಸಮಾಜ ಸೇವಕ ಭವರ್‌ಲಾಲ್ ನಹಾರ್, ಕೆ.ಎಂ. ಶಂಕರಯ್ಯ, ನಗರಸಭಾ ಮಾಜಿ ಅಧ್ಯಕ್ಷ ಬಿಸಾಟಿ ಸೋಮಪ್ಪ, ಆರ್ಯವೈಶ್ಯ ಸಮಾಜದ ಮುಖಂಡ ಭೂಪಾಳ್ ರಾಘವೇಂದ್ರ ಶೆಟ್ಟಿ, ಕೆ. ಚಂದ್ರಶೇಖರಪ್ಪ, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ್, ನಗರಸಭಾ ಸದಸ್ಯರಾದ ಟಿ. ಚಿದಾನಂದಪ್ಪ, ಕೆ. ಗೌಸ್, ಅಕ್ಕನ ಬಳಗದ ಅಧ್ಯಕ್ಷೆ ಕೆ. ರತ್ನಮ್ಮ ಭಾಗವಹಿಸುವರು.
ಸಂಜೆ ನಡೆಯಲಿರುವ ಬಸವ ಜಯಂತಿ ಶತಮಾನೋತ್ಸವ ಸಮಾರಂಭದಲ್ಲಿ ತೋಂಟದಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಜಿ. ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ದೀಪಕ್ ಕುಮಾರ್ ಸಿಂಗ್, ಉದ್ಯಮಿಗಳಾದ ಗೊಗ್ಗ ಚನ್ನಬಸವರಾಜ್, ಆರ್.ಪಿ. ಪ್ರಕಾಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಕೆ. ಕೊಟ್ರೇಶ್, ಕಾರ್ಯದರ್ಶಿ ಕೆ.ಎಸ್. ಲಿಂಗಪ್ಪ, ಮುಖಂಡರಾದ ಎಚ್. ಬಿಡ್ಡಪ್ಪ, ಕೆ. ಉದಯಶಂಕರ್, ಗೊಂಗಡಶೆಟ್ಟಿ ವಿರೂಪಾಕ್ಷಪ್ಪ, ಎಚ್.ವಿ. ಶರಣುಸ್ವಾಮಿ, ಜಿ. ಲಿಂಗಾರೆಡ್ಡಿ, ಗುರುಸಿದ್ದೇಶ್ವರ ಕೊತಂಬ್ರಿ, ಎಂ. ವಿರೂಪಾಕ್ಷಯ್ಯ ಸ್ವಾಮಿ, ಎಲ್. ನಾಗರಾಜ್, ವಡಿಗೇರಿ ಜಯಣ್ಣ, ಜೀರ ವೀರೇಶ್, ಬಾವಿಕಟ್ಟಿ ಮುರಳಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement