ರವೀಂದ್ರಗೆ ಸಚಿವ ಸ್ಥಾನ ನೀಡಲು ಆಗ್ರಹ
ಕೊಟ್ಟೂರು: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜಯ ಸಾಧಿಸಿದ ಎಂ.ಪಿ. ರವೀಂದ್ರರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮೈದೂರು ಗ್ರಾಪಂ ಸದಸ್ಯ ಕೆ. ಸತೀಶ್ ಗಜಾಪುರ ಒತ್ತಾಯಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಬಳ್ಳಾರಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾಗಿರುವ ರವೀಂದ್ರ ಸದಾ ಜನರ ಮಧ್ಯೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉತ್ತಮವಾಗಿ ಸಂಘಟಿಸಿ, ಕಾಂಗ್ರೆಸ್ನ ಗೆಲವಿಗೆ ಕಾರಣರಾಗಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡರಾದ ಎಂ. ಲಕ್ಕಪ್ಪ, ಜೆ. ಮಲ್ಲೇಶ್, ಜಿ.ಎಸ್.ಎಂ. ಮಹಾಲಿಂಗಯ್ಯ, ಎಸ್.ಎಂ. ಶಿವಮೂರ್ತಿ, ಮಹಾದೇವಯ್ಯ, ಎ. ಮಲ್ಲಿಕಾರ್ಜುನ, ಮಹಾಂತೇಶ್ ಕಂಚಿಕೇರಿ, ಕೊಟ್ರೇಶ್ ಇದ್ದರು.