ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಉಜ್ಜಿನಿ ಗುರು ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ

Mainashree
Updated On : 15 May 2013, 10:47 am

ಕನ್ನಡ ಪ್ರಭವಾರ್ತೆ, ಕೊಟ್ಟೂರು, ಮೇ 14
ಪಂಚಪೀಠಗಳ ಎರಡನೆಯ ಪೀಠದ ಅಧಿಪತಿ ಉಜ್ಜಿನಿ ಸದ್ಧರ್ಮಪೀಠದ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ಸಮೀಪದ ಉಜ್ಜಿನಿ ಗ್ರಾಮದಲ್ಲಿ ಮಂಗಳವಾರ ಸಂಜೆ ಗೋಧೂಳಿ ಸಮಯದಲ್ಲಿ ಜರುಗಿತು.
ರಥೋತ್ಸವ ಸಮಯದಲ್ಲಿ ಭಕ್ತರು ಜೈಕಾರ ಹಾಕುತ್ತಾ ಬಾಳೆ ಹಣ್ಣು ತೂರಿ ನಮಿಸಿದರು. ತ್ರೀಕಾಲ ಪೂಜಾ ವಂದಿತ ಶ್ರೀಸ್ವಾಮಿಗೆ ಅಪರಾಹ್ನದ ಪೂಜೆ ವಿಧಿ-ವಿಧಾನ ನೆರವೇರಿಸಿದರು. ನಂತರ ಶ್ರೀಸ್ವಾಮಿಯ ಬೆಳ್ಳಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯು ದೇವಸ್ಥಾನದ ಪೂಜಾ ಸಿಬ್ಬಂದಿ ಮತ್ತು ಆಯಗಾರ ಬಳಗದವರು ಸಕಲ ಬಿರುದಾವಳಿಗಳೊಂದಿಗೆ ರಥಬೀದಿಯಲ್ಲಿನ ಮಂಟಪವನ್ನು ಮೂರು ಸುತ್ತು ಹಾಕಿ, ನಂತರ ರಥದ ಬಳಿ ತೆರಳಿ ರಥದ ಸುತ್ತ ಮೂರು ಸುತ್ತು ಹಾಕಿತು. ಬಳಿಕ ಉತ್ಸವ ಮೂರ್ತಿಯನ್ನು ಸಂಜೆ 5.22ರ ಸುಮಾರಿಗೆ ರಥೋತ್ಸವ ಆರಂಭಗೊಂಡಿತು.
ಮೆರವಣಿಗೆಯ ಉದ್ದಕ್ಕೂ ಶೃಂಗರಿಸಲಾದ ಪೀಠದ ಆನೆಯು ಜನರನ್ನು ಆಕರ್ಷಿಸಿತು. ಸಮಾಳ, ನಂದಿಕೋಲು ಕುಣಿತ, ಡೊಳ್ಳು ಮತ್ತಿತರ ವಾದ್ಯಗಳ ನಾದ ರಥೋತ್ಸವಕ್ಕೆ ಮೆರಗು ತಂದಿತು.
ರಥ ಬನ್ನಿ ಮಂಟಪದವರೆಗೆ ತೆರಳಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಸಂಜೆ 6.45ಕ್ಕೆ ನೆಲೆನಿಂತಿತು. ಸದ್ಧರ್ಮಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ ರಥದ ಬಳಿಯ ಮಂಟಪದಲ್ಲಿ ಆಸೀನರಾಗಿದ್ದರು. ಜನತೆ ಶ್ರೀಗಳ ಆಶೀರ್ವಾದ ಪಡೆದರು. ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್ ಸೇರಿದಂತೆ ಹಲವು ಹರ-ಗುರು-ಚರ ಮೂರ್ತಿಗಳು ಇದ್ದರು.
ಸಂತೃಪ್ತಿಯ ಸಂಕೇತ: ಧಾರ್ಮಿಕ ಉತ್ಸವಗಳು ನೆಮ್ಮದಿ, ಸಂತೃಪ್ತಿ ತಂದುಕೊಡುತ್ತವೆ. ಇದಕ್ಕಾಗಿಯೇ ಜನತೆ ಉತ್ಸವಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ಥಕತೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಉಪದೇಶಾಮೃತ ನೀಡಿದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement