ಎಸ್ಸೆಸ್ಸೆಲ್ಸಿ: ಶೇ. 100 ಫಲಿತಾಂಶ
ಹೊಸಪೇಟೆ: 2012-13ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸ್ಥಳೀಯ ಸುಪ್ರೇರಣ ಎಜುಕೇಷನ್ ಟ್ರಸ್ಟ್ನ ನಿವೇದಿತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ. 100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎ. ಯಶಸ್ವಿನಿ ಶೇ. 93ರಷ್ಟು ಅಂಕಗಳು, ಎ. ಮಹಾಂತೇಶ್ ಶೇ. 90ರಷ್ಟು ಅಂಕಗಳು, ಜಿ.ಎನ್. ಭಾರ್ಗವ ಶೇ. 89ರಷ್ಟು ಅಂಕಗಳು, ಬಿ.ಕೆ. ಅನುರಾಧ ಮತ್ತು ಡಿ. ಚಾಂದಿನಿ ಶೇ. 86ರಷ್ಟು ಅಂಕಗಳನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ಉತ್ತಮ ಅಂಕ ಪಡೆದುಕೊಂಡು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮುಖ್ಯಗುರುಗಳು ಮತ್ತು ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.