ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾನೇ ಗೆದ್ದಷ್ಟು ಸಂತಸ: ಬೊಮ್ಮಣ್ಣ

Mainashree
Updated On : 15 May 2013, 10:48 am

ಕೂಡ್ಲಿಗಿ:  ಪಕ್ಷೇತರ ಅಭ್ಯರ್ಥಿ ಬಿ. ನಾಗೇಂದ್ರ ಗೆಲವು ನಾನೇ ಗೆದ್ದಷ್ಟು ಸಂತಸ ತಂದಿದೆ ಎಂದು ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಹೇಳಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಬೇಕೆಂಬ ಬಯಕೆಯಿಂದ ಪಕ್ಷೇತರ ಅಭ್ಯರ್ಥಿ ಪರವಾಗಿದ್ದೆವು. ಕಾಂಗ್ರೆಸ್‌ನಿಂದ ಎರಡು ಬಾರಿ ಟಿಕೆಟ್ ತಪ್ಪಿಸಲು ನಮ್ಮ ಸಂಬಂಧಿ ಆದ ವೆಂಕಟೇಶ್‌ನನ್ನು ಮುಂದಿಟ್ಟುಕೊಂಡು ಕೂಡ್ಲಿಗಿ ತಾಲೂಕು ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಪಿತೂರಿ ನಡೆಸಿದ್ದರು. ನನಗೆ ಪರ್ಯಾಯ ನಾಯಕನನ್ನು ಬೆಳೆಸಬೇಕೆಂಬ ಉದ್ದೇಶದಿಂದ ಕೆಲವು ಮುಖಂಡರು ಎರಡು ಬಾರಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು. ಪರ್ಯಾಯ ನಾಯಕತ್ವ ಸೃಷ್ಟಿಸಲು ಹೋಗಿ ಅವರೇ ಮುಖಭಂಗಕ್ಕೊಳಗಾಗಿದ್ದಾರೆಂದು ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಹೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಸಂಪತ್ತು ಲೂಟಿಯಾಗುತ್ತಿದೆ ಎಂದು ಬಳ್ಳಾರಿಗೆ ಕಾಲ್ನಡಿಗೆಯಲ್ಲಿ ಬಂದ ನಾಯಕರಾದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಣಿ ಕಳ್ಳರಿಗೆ ಪ್ರತ್ಯೇಕ ಕೋರ್ಟ್ ಸ್ಥಾಪಿಸಿ ವಿಚಾರಣೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ಅವರ ಪಕ್ಷದಲ್ಲೇ ಗಣಿ ಕಳ್ಳರು ಗೆದ್ದಿದ್ದಾರೆ. ಅವರನ್ನು ಸಹ ವಿಚಾರಣೆಗೆ ಒಳಪಡಿಸುವರೇ ಎಂದು ಪ್ರಶ್ನಿಸಿದರು.  ಈ ಸಂದರ್ಭದಲ್ಲಿ ವಡ್ಡಿನ ಶಿವಣ್ಣ, ಹೊಸಹಟ್ಟಿ ನರಸಿಂಹರಾಜು, ಕುರಿಹಟ್ಟಿ  ಕೋದಂಡರಾಮ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement