ಬಸವ ಸೇನೆ ಅಸ್ತಿತ್ವಕ್ಕೆ
ಬಳ್ಳಾರಿ: ಬಸವ ಸೇನೆ ಜಿಲ್ಲಾ ಘಟಕವು ಅಸ್ತಿತ್ವಕ್ಕೆ ಬಂದಿದೆ. ನಗರದ ಕನಕದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಬಸವ ಸೇನೆ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಜರುಗಿತು. ಬಸವ ಸೇನೆಯ ರಾಜ್ಯ, ಜಿಲ್ಲಾ, ತಾಲ್ಲೂಕು ಘಟಕಗಳನ್ನು ಅಸ್ತಿತ್ವಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಬಸವ ಸೇನೆ ಸಂಚಾಲಕರಾದ ಕೆ. ಬಸವರಾಜಗೌಡ, ಆರ್. ಶರಣ, ಬಸವನಗೌಡ, ವಿ.ಆರ್. ಮಹೇಶ್ ತಿಳಿಸಿದ್ದಾರೆ.