ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಂಕರಾಚಾರ್ಯ ಜಯಂತಿ ಇಂದಿನಿಂದ

Mainashree
Updated On : 15 May 2013, 10:46 am

ಹೊಸಪೇಟೆ: ಸ್ಥಳೀಯ ಕೋಟೆ ಶಂಕರ ಮಂಡಳಿಯಿಂದ 91ನೇ ಶಂಕರಾಚಾರ್ಯ ಜಯಂತ್ಯುತ್ಸವನ್ನು ಶಂಕರಲಿಂಗ ದೇವಸ್ಥಾನದಲ್ಲಿ ಮೇ 15ರಿಂದ 20ರ ವರೆಗೆ ನಡೆಯಲಿದೆ. ಮೇ 15ರ ಬೆಳಗ್ಗೆ 8ಕ್ಕೆ ರುದ್ರಾಭಿಷೇಕ, ಭಜನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ವಿಶೇಷ ಪೂಜೆ ಆಚರಿಸಲಾಗುವುದು. ಸಂಜೆ 6ಕ್ಕೆ ಜಗದ್ಗುರು ಶಂಕರಾಚಾರ್ಯ ಪಲ್ಲಕಿ ಉತ್ಸವ, ಮೇ 16ರಿಂದ 19ರ ವರೆಗೂ ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 20ರಂದು ರುದ್ರಸ್ವಾಹಾಕಾರ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement