25ರಂದು ವಡಕರಾಯ ಸ್ವಾಮಿ ರಥೋತ್ಸವ
ಬಳ್ಳಾರಿ: ಹೊಸಪೇಟೆ ನಗರದ ಶ್ರೀ ವಡಕರಾಯ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ ರಥೋತ್ಸವ ಮೇ 25ರಂದು ಜರುಗಲಿದೆ. ಉತ್ಸವದ ಅಂಗವಾಗಿ ಮೇ 17ರಂದು ವೆಂಕಟೇಶ್ವರ ಪದ್ಮಾವತಿ ಪ್ರತಿಷ್ಠಾಪನೆಯ 10ನೇ ವರ್ಷ ಪ್ರಯುಕ್ತ 108 ಕುಂಭ ಕ್ಷೀರಾಭಿಷೇಕ, ಶ್ರೀ ಸೂಕ್ತ ಹೋಮ ಮತ್ತು ಕಲ್ಯಾಣೋತ್ಸವ ನಡೆಯಲಿದೆ. ಮೇ 19ರಂದು ಸಂಜೆ 7 ಗಂಟೆಗೆ ಕಂಕಣಧಾರಣೆ ನವಗ್ರಹ ಕಳಸ ಸ್ಥಾಪನೆ, 20ರಂದು ಬೆಳಗ್ಗೆ 7.30ಕ್ಕೆ ಪಲ್ಲಕ್ಕಿ ಸೇವೆ ಹಾಗೂ ಸಂಜೆ 7ಕ್ಕೆ ಮಯೂರ ವಾಹನೋತ್ಸವ, 21ರಂದು ಬೆಳಗ್ಗೆ 7.30 ಗಂಟೆಗೆ ಮಯೂರ ವಾಹನೋತ್ಸವ ಹಾಗೂ ಸಂಜೆ 7ಕ್ಕೆ ಸಿಂಹ ವಾಹನೋತ್ಸವ, 22ರಂದು ಬೆಳಗ್ಗೆ 7.30ಕ್ಕೆ ಸಿಂಹ ವಾಹನೋತ್ಸವ ಅನಂತರ ಸಂಜೆ 7.30ಕ್ಕೆ ಅಶ್ವ ವಾಹನೋತ್ಸವ, 23ರಂದು ಬೆಳಗ್ಗೆ 7.30ಕ್ಕೆ ಅಶ್ವ ವಾಹನೋತ್ಸವ, ಅನಂತರ ಸಂಜೆ 7ಕ್ಕೆ ಹನುಮಂತೋತ್ಸವ, ರಾತ್ರಿ 7.30ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ, 24ರಂದು ಬೆಳಗ್ಗೆ 7.30ಕ್ಕೆ ಗರುಡೋತ್ಸವ ಹಾಗೂ ಉಯ್ಯಾಲೆ ಸೇವೆ, ರಾತ್ರಿ 7.30ಕ್ಕೆ ಐರಾವತ ಉತ್ಸವ, 25ರಂದು ಬೆಳಗ್ಗೆ 11ಕ್ಕೆ ಶ್ರೀ ಸ್ವಾಮಿಯ ಬ್ರಹ್ಮೋತ್ಸವ, ಸಂಜೆ 4 ಗಂಟೆಗೆ ಶ್ರೀ ವಡಕರಾಯ ಸ್ವಾಮಿ ರಥೋತ್ಸವ, 26ರಂದು ಸಂಜೆ 7 ಗಂಟೆಗೆ ಹನುಮಂತೋತ್ಸವ ಹಾಗೂ ಕಡುಬಿನ ಕಾಳಗ, 27ರಂದು ಬೆಳಗ್ಗೆ 7.30ಕ್ಕೆ ವಸಂತೋತ್ಸವ ಹಾಗೂ ಕಂಕಣ ವಿಸರ್ಜನೆ ನಡೆಯಲಿದೆ ಎಂದು ಆಡಳಿತಾಧಿಕಾರಿ ಎಂ.ಎಚ್. ಪ್ರಕಾಶ್ರಾವ್ ಕೋರಿದ್ದಾರೆ.