ಭುವನ ವಿಜಯ ಬಸ್ ಸಂಚಾರ: ಸ್ವಾಗತ
ಬಳ್ಳಾರಿ: ನಗರದಲ್ಲಿ ಭುವನ ವಿಜಯ ಎಂಬ ಹೆಸರಿನಲ್ಲಿ 33 ಹೊಸ ಬಸ್ಗಳನ್ನು ಸಂಚರಿಸಲು ಅನುಕೂಲ ಕಲ್ಪಿಸಿರುವ ಕ್ರಮವನ್ನು ನವ ಕರ್ನಾಟಕ ಯುವಶಕ್ತಿ ಜಿಲ್ಲಾ ಘಟಕ ಸ್ವಾಗತಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನವ ಕರ್ನಾಟಕ ಯುವಶಕ್ತಿಯ ಗೌರವಾಧ್ಯಕ್ಷ ಸಿ.ವೀರಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಅಧ್ಯಕ್ಷ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್ ಮತ್ತಿತರರು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್ ಶಿವಮೂರ್ತಿ ಅವರು, ಬಳ್ಳಾರಿ ನಗರದಲ್ಲಿ ಸಾರ್ವಜನಿಕರ ಸದುಪಯೋಗಕ್ಕಾಗಿ ಅತೀ ಕಡಿಮೆ ದರದಲ್ಲಿ ಪ್ರಯಾಣಿಕರು ಸಂಚರಿಸಲು, ನಗರದಲ್ಲಿ 33 ಅತ್ಯಾಧುನಿಕ ಹಸಿರು ಬಣ್ಣದ ಬಸ್ಗಳನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ಬಸ್ಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.