ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಥಾ ಸಂಕಲನ ಆಹ್ವಾನ

Lingaraj Badiger
Updated On : 20 May 2013, 11:18 am

ಬಳ್ಳಾರಿ: ಕೊಡಗಿನ ಎಸ್.ಎನ್. ವಿಜಯಶಂಕರ್ ಅವರು ಕಸಾಪ ಸ್ಥಾಪಿಸಿರುವ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ ನೀಡಲು ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ರು. 5000 ನಗದನ್ನು ಒಳಗೊಂಡಿರುತ್ತದೆ. ಕಥಾ ಸಂಕಲನವು 2010, 2011 ಮತ್ತು 2012ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು. ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಕೃತಿಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗಿದೆ. ಆಸಕ್ತ  ಬರಹಗಾರರು ಜೂ. 30ರೊಳಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಇವರಿಗೆ 3 ಪ್ರತಿಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-080-26623584ನ್ನು ಸಂಪರ್ಕಿಸುವಂತೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ತಿಳಿಸಿದ್ದಾರೆ.

ಹಾಸ್ಟೆಲ್‌ಗೆ ಅರ್ಜಿ ಆಹ್ವಾನ
ಬಳ್ಳಾರಿ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಸಿರುಗುಪ್ಪ ತಾಲೂಕಿನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
ಸಿರುಗುಪ್ಪ, ಕರೂರು, ಹಚ್ಚೊಳ್ಳಿ, ಬಿ.ಎಂ.ಸೂಗೂರು, ತೆಕ್ಕಲಕೋಟೆ ಮತ್ತು ಎಂ. ಸೂಗೂರಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಸಿರುಗುಪ್ಪ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಕರೆಯಾಗಿದೆ. ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಅರ್ಜಿಗಳನ್ನು ಜೂನ್ 11ರೊಳಗಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಬಿ. ಬೆಳಗಲ್ಲು: ಸಾಮೂಹಿಕ ವಿವಾಹ
ಬಳ್ಳಾರಿ: ತಾಲೂಕಿನ ಬಿ. ಬೆಳಗಲ್ಲು ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ನೂತನ ಮುಖದ್ವಾರ ಮಂಟಪ ಉದ್ಘಾಟನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ವಾಮದೇವ ಮಹಾಂತ ಶಿವಾಚಾರ್ಯ ಶ್ರೀ, ಕಲ್ಯಾಣ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ನವ ದಂಪತಿಗಳಿಗೆ ಆಶೀರ್ವದಿಸಿದರು. ಜೆ.ಎನ್. ಪಂಪಾಪತಿ ಶಾಸ್ತ್ರಿ, ಶಿಷ್ಯವೃಂದ ಸಾಮೂಹಿಕ ವಿವಾಹ  ನೆರವೇರಿಸಿದರು.  ಜೆ.ಎಂ ಬಸವರಾಜಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಚ್. ಯುವರಾಜ ಗೌಡ, ಮೃತ್ಯುಂಜಸ್ವಾಮಿ, ಜೆ.ಎಂ. ಮಂಜುನಾಥ, ಬಿ.ಎಂ. ಸಿದ್ದಮೂರ್ತಿಸ್ವಾಮಿ, ಎಚ್.ಎಂ. ಅಮರೇಶ್, ಕೆ.ಎಂ. ಕೊಟ್ರೇಶ್, ಕೆ.ಎಂ. ಪಂಪಾಪತಿ, ಕೆ.ಎಂ. ಶಿವನಂದ, ಜೆ. ದೊಡ್ಡಬಸಪ್ಪ, ಬಿ. ಕೃಷ್ಣಪ್ಪ, ಕೆ.ಎಂ. ತಿಪ್ಪೇಸ್ವಾಮಿ, ಚಾನಾಳ್ ಮೃತ್ಯುಂಜಸ್ವಾಮಿ, ಸಿದ್ದಪ್ಪ, ಸಿದ್ದಲಿಂಗಸ್ವಾಮಿ, ನಾಗಯ್ಯ, ವಿರೇಶ್, ರಮೇಶ್, ಯನ್ನಪ್ಪ, ಕೆ.ಎಂ. ಬಸವರಾಜ್, ಎಚ್. ದಾದಪೀರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement