ಇಂದು ಅತಿಥಿ ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಕೌಟಿಲ್ಯ ಅರ್ಥಶಾಸ್ತ್ರ ಸಂಘದಡಿ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಮೇ 24ರ ಬೆಳಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿ.ವಿ.ಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಬೆಣ್ಣಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಮಂಜಪ್ಪ ಡಿ. ಹೊಸಮನೆ ವಹಿಸಲಿದ್ದಾರೆ. ಕುಲಸಚಿವ ಪ್ರೊ. ಕೆ. ವಿಜಯಕುಮಾರ ಹಾಗೂ ಕುಲಸಚಿವ (ಪರೀಕ್ಷಾಂಗ) ಪ್ರೊ. ರಂಗರಾಜು ವನದುರ್ಗ ಭಾಗವಹಿಸಲಿದ್ದಾರೆ. ಹ್ಯೂಮನ್ ಡೆವೆಲಪ್‌ಮೆಂಟ್ ರಿಪೋರ್ಟ್ ಇಷ್ಯೂಸ್ ಅಂಡ್ ಚಾಲೆಂಜಸ್ ಕುರಿತು ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರೊ. ಬಿ.ಕೆ. ತುಳಸೀಮಾಲಾ ಹಾಗೂ ಪಾಪ್ಯುಲೇಷನ್ ಸ್ಟ್ಯಾಬಿಲೈಜೇಷನ್ ಆಕ್ಷನ್ ಅಹೆಡ್ ಕುರಿತು ಧಾರವಾಡ ಕರ್ನಾಟಕ ವಿವಿಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಟಿ. ಬಾಗಲಕೋಟೆ ಉಪನ್ಯಾಸ ನೀಡಲಿದ್ದಾರೆ.