ಕಾರ್ಮಿಕರಿಗೆ ಲೈಸೆನ್ಸ್ ವಿತರಣೆ
ಬಳ್ಳಾರಿ: ನಗರದ ಎಪಿಎಂಸಿ ಆವರಣದಲ್ಲಿರುವ ಹಮಾಲರ ಕಚೇರಿಯಲ್ಲಿ ಅಸಂಘಟಿತ ಮಹಿಳಾ ಹಮಾಲಿ ಕಾರ್ಮಿಕರಿಗೆ ಲೈಸೆನ್ಸ್ ವಿತರಣಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಹಮಾಲರ ಸಂಘದ ಅಧ್ಯಕ್ಷ ಹಂಪೇರು ಆಲೇಶ್ವರ ಗೌಡ ಅಧ್ಯಕ್ಷತೆ ವಹಿಸಿ, ಮುಂದಿನ ದಿನಗಳಲ್ಲಿ ಎಪಿಎಂಸಿಯಲ್ಲಿ ದುಡಿಯುವ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂದರು. 61 ಮಹಿಳೆಯರಿಗೆ ಹಾಗೂ 8 ಪುರುಷರಿಗೆ ಲೈಸೆನ್ಸ್ ವಿತರಣೆ ಮಾಡಲಾಯಿತು. ಎಪಿಎಂಸಿ ಅಧ್ಯಕ್ಷ ವೀರೇಶ್ ಗೌಡ, ಜಂಟಿ ನಿರ್ದೇಶಕಿ, ಕಾರ್ಯದರ್ಶಿ ಸರಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಗವಿಸಿದ್ದಪ್ಪ, ಮುಖಂಡರಾದ ನಾಗರಾಜ್, ಬೊಮ್ಮಣ್ಣ, ಅಂಬಮ್ಮ, ರುದ್ರಪ್ಪ, ಸಿದ್ದಮ್ಮ, ಎರ್ರಮ್ಮ ದೇವಿ, ಪದ್ಮಾ, ಸುಂಕಮ್ಮ, ಚಿತ್ರಾಲಿಂಗಪ್ಪ, ಲಕ್ಷ್ಮಣ, ಕೊನಿಗಪ್ಪ ಇದ್ದರು.