ಕಲಕೇರಿ: ಮಕ್ಕಳ ಬೇಸಿಗೆ ಶಿಬಿರ
ಕುಷ್ಟಗಿ: ತಾಲೂಕಿನ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಶನಿವಾರ ಶಾಲಾ ಮಕ್ಕಳ ಬೇಸಿಗೆ ಶಿಬಿರ ನಡೆಯಿತು. ಅಕ್ಷರ ಫೌಂಡೇಶನ್ ಹಿರಿಯ ಸದಸ್ಯ ಶಂಕರ ನಾರಾಯಣ ಮಾತನಾಡಿ, ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಮುದಾಯದ ಪಾತ್ರ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕ, ತನ್ನ ಮಗುವಿನ ಶಿಕ್ಷಣ ಮತ್ತು ಪ್ರಗತಿ ಬಗ್ಗೆ ನಿರಂತರ ಕಾಳಜಿ ವಹಿಸಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕ ಮಹಾಂತಪ್ಪ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳ ಕ್ರೀಯಾಶೀಲತೆ ಹೆಚ್ಚಿಸಲು ಸಹಕಾರಿಯಾಗಿವೆ ಎಂದರು. ಗ್ರಾಪಂ ಸದಸ್ಯರಾದ ಲಕ್ಷ್ಮವ್ವ ಮಾಟರಂಗಿ ಹಾಗೂ ಲಚ್ಚಪ್ಪ ನಾಯಕ್ ಉದ್ಘಾಟಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರಾಮಪ್ಪ ಹರಿಜನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ಪ ದೇಸಾಯಿ, ವೀರಪ್ಪ ತೋಪಲಕಟ್ಟಿ, ಬಸವಂತಪ್ಪ ಸಾಹುಕಾರ, ಸಂಗಪ್ಪ ಗೋನಾಳ, ತಿಮ್ಮಪ್ಪ ಹರಿಜನ, ಈರಪ್ಪ ಉಳ್ಳಾಗಡ್ಡಿ, ನಿರಪಾದಿ ಹರಿಜನ, ಮಂಜುನಾಥ ತಳವಾರ, ಅಮರೇಶ ಕಿಲ್ಲೇದಮಠ, ವೀರೇಶ ಬಲಕುಂದಿ, ಮುತ್ತಪ್ಪ ಪಾಟೀಲ್, ಗ್ಯಾನಪ್ಪ ತಳವಾರ ಉಪಸ್ಥಿತರಿದ್ದರು. ಈರಮ್ಮ ಸಂಗಡಿಗರು ಪ್ರಾರ್ಥಿಸಿದರು. ರಾಘು ನಾಯಕ ಸ್ವಾಗತಿಸಿದರು. ಅಕ್ಷರ ಫೌಂಡೇಶನ್‌ನ ಗೋವಿಂದಪ್ಪ ರಾಠೋಡ್ ನಿರೂಪಿಸಿದರು. ಶಂಕ್ರಪ್ಪ ಸ್ವಾಮಿ ವಂದಿಸಿದರು.