ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬುದ್ಧ, ಬಸವ, ಅಂಬೇಡ್ಕರ್ ಕುರಿತು ವಿಚಾರ ಸಂಕಿರಣ

Vishwanath S
Updated On : 26 May 2013, 1:16 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 25
ಬುದ್ಧ ಎಂದರೆ ನಮ್ಮ ಅರಿವು. ಅದನ್ನು ವಿಸ್ತರಿಸಿಕೊಳ್ಳುವುದೇ ಬುದ್ಧ ಪೌರ್ಣಿಮೆಯದಿನದ ಆಚರಣೆಯಾಗಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಡಾಮ್ನಿಕ್ ಹೇಳಿದರು.
ನಗರದಲ್ಲಿ ಶನಿವಾರ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ ಬುದ್ಧ ಪೌರ್ಣಿಮೆ ಅಂಗವಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ಕುರಿತು ವಿಚಾರ ಸಂಕಿರಣ ಹಾಗೂ ಹೊಸಪೇಟೆ ಸ್ಲಂ ಹಬ್ಬ- 2013 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದುಡಿಮೆಯಿಂದ ಹೊರ ಬರುವುದೇ ಅರಿವು. ಇದನ್ನೇ ಬುದ್ಧ, ಬಸವಣ್ಣ, ಅಂಬೇಡ್ಕರ್ ಹೇಳಿದ್ದು, ದುಡಿಯುವ ಜನರು ತಮ್ಮ ಹಬ್ಬದಲ್ಲಿ ಈ ಅರಿವಿನ ಬೆಳಕು ಹಚ್ಚಿ ದಾರಿ ಕಾಣಬೇಕು ಎಂದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟ, ಪರಿಶ್ರಮದಿಂದ ದಲಿತರಿಗೆ ಸಂವಿಧಾನದಲ್ಲಿ ಅವಕಾಶ ಸಿಗುವಂತಾಗಿದೆ. ಅದನ್ನು ಹೋರಾಟದ ದಾರಿಯನ್ನಾಗಿ ಮಾಡಿಕೊಂಡು ಸ್ಲಂಗಳ ಅಭಿವೃದ್ಧಿಯಲ್ಲಿ ಸ್ಲಂ ಜನರು ಬೆಳಕು ಕಾಣಬೇಕಿದೆ ಎಂದರು.
ಪತ್ರಕರ್ತ ಪರಶುರಾಮ ಕಲಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಮಲಾಪುರದ ಸಂಪತ್ ಬಾಯಿ, ಕಮಲಾಪುರ ಸ್ಲಂ ಸಮಿತಿ ಅಧ್ಯಕ್ಷ ದೇವಪ್ರಿಯ, ಸುಡುಗಾಡ ಸಿದ್ಧರ ವಿರೂಪಾಕ್ಷಪ್ಪ, ಸಿಂಧೂಳಿ ಸಮಾಜದ ರಾಚಯ್ಯ, ಸ್ಲಂ ಸಮಿತಿಯ ಸಂಚಾಲಕರಾದ ರಾಮಚಂದ್ರ, ಎನ್. ಹುಲಿಗೆಮ್ಮ, ಮುಖಂಡರಾದ ಹನುಮಂತರಾಯ, ಮಾರೆಮ್ಮ, ನಾಗಲಕ್ಷ್ಮಿ, ಹುಸೇನ್‌ಬಿ, ವೆಂಕಮ್ಮ, ಗೀತಾಂಜಲಿ, ಸಣ್ಣತಿಪ್ಪಮ್ಮ, ವೆಂಕಟೇಶುಲು, ಗಿರೀಶ್, ಬಸಮ್ಮ, ವಿರೂಪಾಕ್ಷಿ, ವೆಂಕಟಮ್ಮ ಉಪಸ್ಥಿತರಿದ್ದರು. ಸ್ಲಂ ಸಮಿತಿ ಸಂಚಾಲಕಿ ಎನ್. ಹುಲಿಗೆಮ್ಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ನಿರೂಪಿಸಿದರು.
ವಿಚಾರ ಸಂಕಿರಣದ ನಂತರ ಸ್ಲಂ ನಿವಾಸಿಗಳು ಸ್ಲಂ ಹಬ್ಬ ಆಚರಿಸುವ ಮೂಲಕ ವಿವಿಧ ಸಾಂಸ್ಕೃತಿಕ ಕಲೆ ಪ್ರದರ್ಶಿಸಿದರು. ನೂರಾರು ಸ್ಲಂ ನಿವಾಸಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಜ್ಯ ಪ್ರಶಸ್ತಿ ವಿಜೇತ ಸುಡುಗಾಡ ಸಿದ್ಧರ ವಿರೂಪಾಕ್ಷಪ್ಪ ಹಾಗೂ ಡಾ. ಡಾಮ್ನಿಕ್ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement