ಜೂ. 3ರಿಂದ ಕಾರ್ಯಾಗಾರ
ಬಳ್ಳಾರಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಜೂನ್ 3ರಿಂದ 7ರ ವರೆಗೆ ಐದು ದಿನಗಳ ಕಾಲ ನೃತ್ಯಾವಧಾನ ಎಂಬ ವಿಶೇಷ ನೃತ್ಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಟಿ.ಜಿ. ನರಸಿಂಹಮೂರ್ತಿ ತಿಳಿಸಿದ್ದಾರೆ. ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಮೂಲ್ಕಿಯ ಪುನರೂರಿನ ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 8.30ರ ವರೆಗೆ ನಡೆಯಲಿದೆ. ಹಿರಿಯ ಮತ್ತು ಪರಿಣಿತಿ ಹೊಂದಿರುವ ಪದ್ಮಿನಿ ರಾಮಚಂದ್ರನ್ ಭರತನಾಟ್ಯ, ಲಕ್ಷ್ಮೀ ರಾಜಾಮಣಿ ಕೂಚಿಪುಡಿ, ಜಯಂತಿ ಈಶ್ವರ ಪುತ್ತಿ ಕಥಕ್, ಇಂದಿರಾ ಕಡಾಂಬಿ ಅಭಿನಯ ನೃತ್ಯ ಪ್ರಕಾರಗಳಲ್ಲಿ ತರಬೇತಿ ನೀಡಲಿದ್ದಾರೆ. ಡಾ. ಕರುಣಾ ವಿಜಯೇಂದ್ರ, ನಂದಿನಿ ಈಶ್ವರ್ ಮತ್ತು ಎಂ.ಎಲ್. ಸಾಮಗ ಅವರು ಯೋಗಾಭ್ಯಾಸ, ನೃತ್ಯ ಪಾಠ ಮಾಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಕನಿಷ್ಠ 3 ವರ್ಷ ನೃತ್ಯದಲ್ಲಿ ಶಿಕ್ಷಣ ಪಡೆದಿರಬೇಕು ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ತರಬೇತಿ ಪಡೆಯುವವರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಮೇ 31ರೊಳಗಾಗಿ ದೂ.ಸಂ- 080-22215072 ಅಥವಾ ಇಮೇಲ್ ವಿಳಾಸ ್ಞಛ್ಠಟಿಛಡಿಛ್ಞಛಡಛಟ್ಜಿಜಜಝಿಛಅ್ಜಟಛ್ಝಟ.್ಛ್ಟಟ ಅಥವಾ ಪತ್ರದ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002 ಸಂಪರ್ಕಿಸಬಹುದು.
ಅಪಘಾತ: ಓರ್ವ ಸಾವು
ಬಳ್ಳಾರಿ: ಮಗಳ ಮದುವೆಗೆಂದು ಆಹ್ವಾನ ಪತ್ರಿಕೆ ಕೊಡಲು ಹೋದ ವ್ಯಕ್ತಿ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಡೆದಿದೆ. ಬೆಳಗಲ್ ಗ್ರಾಮದ ಅಂತಾಪುರ ಬಸವರಾಜ್ (43) ಸಾವನ್ನಪ್ಪಿದ ದುರ್ದೈವಿ. ಈತನ ಮಗಳ ಮದುವೆ ಜೂ. 2ರಂದು ಇದ್ದು, ಲಗ್ನ ಪತ್ರಿಕೆಯನ್ನು ಚಾನಾಳ್ ಗ್ರಾಮದಲ್ಲಿ ಕೊಟ್ಟು ಸ್ವಗ್ರಾಮಕ್ಕೆ ಹಿಂತಿರುಗುವಾಗ ಸೋಮಸಮುದ್ರ ಬಳಿ ಟ್ರ್ಯಾಕ್ಸ್ಗೆ ಬೈಕ್ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಆಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸವರಾಜ್ ಮೃತ ಪಟ್ಟಿದ್ದಾರೆ. ಈತನಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮೊದಲ ಪುತ್ರಿ ಮದುವೆ ಜೂ. 2ರಂದು ನಿಶ್ಚಯವಾಗಿತ್ತು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.