ರಾಜ್ಯಕ್ಕಾಗಿ ದುಡಿಯೋಣ
ಹೂವಿನಹಡಗಲಿ: ಕನ್ನಡ ನಾಡು, ನುಡಿ, ನೆಲ, ಜಲ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸೋಣವೆಂದು ತಹಸೀಲ್ದಾರ್ ಎ.ಬಿ. ವಿಜಯಕುಮಾರ ತಿಳಿಸಿದರು. ಜಿಪಿಜಿ ಕಾಲೇಜಿನಲ್ಲಿ ಶುಕ್ರವಾರ ತಾಲೂಕಾಡಳಿತ ಆಯೋಜಿಸಿದ್ದ ಕನ್ನಡ ರಾಜೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಐತಿಹಾಸಿಕ ಪರಂಪರೆ ಹೊಂದಿರುವ ವಿಶ್ವ ಪ್ರಸಿದ್ಧ ಹಂಪಿ ವಿಜಯ ನಗರ ಸಾಮ್ರಾಜ್ಯದ ಶಿಲ್ಪಕಲೆ, ಸಂಸ್ಕೃತಿ ನಮ್ಮಲಿರುವುದು ಎಲ್ಲರಿಗೂ ಹೆಮ್ಮೆ ತರುವಂತದ್ದು ಎಂದರು. ಉಪನ್ಯಾಸಕ ಡಾ. ಸತೀಶ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಹಿತ್ಯ ಕ್ಷೇತ್ರದ ನಾಗರಾಜ ಮಲ್ಕಿ ಒಡೆಯರ್, ರಂಗ ಕಲಾವಿದ ಅಕ್ಕಸಾಲಿ ಚಂದ್ರಪ್ಪ, ಪತ್ರಕರ್ತ ಎಂ. ನಿಂಗಪ್ಪ, ಕಲಾವತಿ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ನೌಕರರ ಸಂಘ ಎಸ್ಸೆಸ್ಸೆಲ್ಸಿ, ಪಿಯುಸಿ ಕನ್ನಡ ಭಾಷೆಯಲ್ಲಿ ಅತ್ಯಧಿಕ ಅಂಕಗಳಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಪಂ ಅಧ್ಯಕ್ಷೆ ಶಿಲ್ಪಾಸಿಂಗ್ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ, ಏಕೀಕರಣ ಹೋರಾಟಗಾರ ಎಂ. ಚನ್ನಪ್ಪ, ಜಿ. ಬಸವನಗೌಡ, ಕೊಟ್ರೇಶ್, ಆರ್.ಎಸ್. ಪಾಟೀಲ್, ಪ್ರಕಾಶ ರಾಠೋಡ್, ಸುರೇಶ ಅಂಗಡಿ, ಎಂ. ತವನಪ್ಪ, ಕಲಿಕೇರಿ ಬಸವರಾಜ, ನಾಗರಾಜ ಮಲ್ಕಿ ಒಡೆಯರ್, ಎಲ್. ಖಾದರ್ ಬಾಷಾ, ಎಂ.ಎಂ. ಗುರುಬಸವರಾಜ, ಪುರಸಭೆ ಸದಸ್ಯರು, ಪ್ರಕಾಶ ಜೈನ್, ಚಂದ್ರಪ್ಪ, ಬಸವರಾಜ ಕೊಳ್ಳಿ, ಶಂಕರ ಬೆಟಗೇರಿ, ಎಂ. ಚಿದಾನಂದ ಉಪಸ್ಥಿತರಿದ್ದರು.