ಬಳ್ಳಾರಿ: ಕರವೇ ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಚೇರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಗರ ಶಾಸಕ ಅನಿಲ್ ಲಾಡ್ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಂ. ಬಸವರಾಜಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಚ್.ಕೆ. ಗೌರಿಶಂಕರ್, ಕಪ್ಪಗಲ್ಲು ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಅಸುಂಡಿ ನಾಗರಾಜ, ಚಾನಾಳು ಶೇಖರ್, ಎಂ. ಮೃತ್ಯುಂಜಯಸ್ವಾಮಿ, ವಿಶ್ವನಾಥ, ಬಿ. ಶಿವಕುಮಾರ್, ಆತ್ಮಾನಂದ ರೆಡ್ಡಿ, ಕಿಶೋರ್, ತಿಪ್ಪಾರೆಡ್ಡಿ, ಶಬರಿ ರವಿ, ಭಾಸ್ಕರ್, ತಿಮ್ಮಪ್ಪ ಎರ್ರಗುಡಿ, ಕೆ.ಬಿ. ಈಶ್ವರ್, ಈಶ್ವರ್ರಾವ್ ಸಂಗನಕಲ್ಲು, ವಿಜಯಕುಮಾರ್ ಸಂಗನಕಲ್ಲು, ನಗರ ಘಟಕ ಅಧ್ಯಕ್ಷ ಪಿ. ಜಗನ್, ಮಹಿಳಾ ಘಟಕದ ಅಧ್ಯಕ್ಷೆ ಸುಮಾರೆಡ್ಡಿ, ಎಚ್. ಯುವರಾಜ್ ಗೌಡ, ಜೆ. ದೊಡ್ಡಬಸಪ್ಪ, ಮುಂಡ್ರಿಗಿ ರಾಜಶೇಖರ್, ಕೆ. ಗಂಗಾಧರ, ವಡ್ಡಿಗೇರಿ ಸೂರಿ, ಸೂರ್ಯಪ್ರಕಾಶ ರೆಡ್ಡಿ, ಚಂದ್ರಮೋಹನ್, ಮಹೇಶ್ ಬಣಕಾರ್, ಹಂದಿಹಾಳು ಪರಶುರಾಂ, ಗಣೇಶ, ಯಲ್ಲಪ್ಪ, ಬಿ. ಕೃಷ್ಣ, ದಾದಾಪೀರ್, ಬಸವರಾಜ, ನಾಗೇಶ್, ಸಿದ್ದಪ್ಪ, ಪಂಪಾಪತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.