ಮಹಿಳೆ ಮೇಲೆ ಅತ್ಯಾಚಾರ: ದೂರು
ಬಳ್ಳಾರಿ: ಗಂಡನ ಆಗಮನದ ನಿರೀಕ್ಷೆಯಲ್ಲಿ ಚಪ್ಪರದ ಕೆಳಗೆ ಮಲಗಿದ್ದ ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ 10 ಗಂಟೆಗೆ ಊಟ ಮಾಡಿದ ನಂತರ ಯಾರೋ ಹಣ ಕೊಡಬೇಕು, ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಗಂಡ ತೆರಳಿದ್ದರಿಂದ ಪತ್ನಿ ಮನೆ ಮುಂದಿನ ಚಪ್ಪರದ ಕೆಳಗೆಯೇ ಮಲಗಿದ್ದಳು. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಂದು ಸಂಭೋಗಿಸಿದ್ದು, ನಿದ್ರೆ ಮಂಪರಿನಲ್ಲಿ ತನ್ನ ಗಂಡನೇ ಎಂದು ತಿಳಿದಿದ್ದಳು. 'ಏನ್ರಿ ಇಷ್ಟೊತ್ತಿಗೆ ಬರುವುದು?' ಎಂದು ಕೇಳಿದಾಗ, ಆರೋಪಿ ರಾಜು ತಾನು 'ನಿನ್ನ ಗಂಡನಲ್ಲ' ಎಂದು ಹೇಳಿದ್ದಾನೆ. ಮಹಿಳೆ ಗಾಬರಿಯಾಗಿ ತಂದೆ-ತಾಯಿಗೆ ಹೇಳುತ್ತೇನೆಂದಿದ್ದಾಳೆ. 'ನಿನ್ನ ಸಂಸಾರದ ಮರ್ಯಾದೆ ಹೋಗುತ್ತದೆ, ಸಾಯಿಸುತ್ತೇನೆ' ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಹಚ್ಚೊಳಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.