ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯೋಗ ಸಮಿತಿಯಿಂದ ದೀಪಾವಳಿ

Vishwanath S
Updated On : 5 Nov 2013, 11:20 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 4
ಚಿತ್ತವಾಡ್ಗಿಯ ಕಲ್ಮಠೇಶ್ವರ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ದೀಪದಿಂದ ದೀಪ ಹಚ್ಚುವ ಮೂಲಕ, ದೀಪದ ಬೆಳಕಿನಲ್ಲಿ ಕುಳಿತು ಯೋಗಾಸನ ಮಾಡಿದ್ದು ಗಮನ ಸೆಳೆಯಿತು.
ಯೋಗ ಸಾಧಕ ವೈ. ವೆಂಕಣ್ಣಶೆಟ್ಟಿ ಮಾತನಾಡಿ, ದೀಪದ ಬೆಳಕಿನಲ್ಲಿ ನಡೆಸುವ ಯೋಗದಿಂದ ಏಕಾಗ್ರತೆ ಉಂಟಾಗುತ್ತದೆ. ನಿತ್ಯ ಯೋಗದಲ್ಲಿ ತೊಡಗಿಕೊಂಡಿರುವವರು ಆರೋಗ್ಯದಿಂದ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮಹಾಲಕ್ಷ್ಮಿ ಮಾತನಾಡಿ, ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕನ್ನು ಚೆಲ್ಲುವ ದೀಪಾವಳಿ ಹಬ್ಬದಂದು ಶಿಬಿರದಲ್ಲಿ ತೊಡಗಿಕೊಂಡಿದ್ದ ಪ್ರತಿಯೊಬ್ಬರೂ ದೀಪದಿಂದ ದೀಪ ಹಚ್ಚುವ ಮೂಲಕ ವಿನೂತನ ರೀತಿ ದೀಪಾವಳಿ ಆಚರಿಸಿ ಈ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಬಹುದು ಎನ್ನುವ ಪರಿಕಲ್ಪನೆ ನೀಡಿದೆ. ಇದು ನಿಜಕ್ಕೂ ಆನಂದವನ್ನುಂಟು ಮಾಡಿದೆ ಎಂದರು.
ಚೇತನ ಸಾಹಿತ್ಯ ಸಂಸ್ಥೆಯ ಅಧ್ಯಕ್ಷ ಎಚ್.ಎಂ. ಜಂಬುನಾಥ, ಯೋಗ ಶಿಕ್ಷಕ ಹುಲುಗಪ್ಪ ಗುರೂಜಿ ಮಾತನಾಡಿದರು.
ಶಿಬಿರದಲ್ಲಿ ಶುಭಾ ಜಿತೇಂದ್ರಬಾಬು, ಎಂ. ರೇಣುಕಾ, ಗಂಗಮ್ಮ, ಎಂ. ಸಂತೋಷ, ನಾಗಮ್ಮ, ಡೊಮ್ಮಿ ವೆಂಕಟೇಶ್, ಎಚ್.ಎಸ್. ಸುಬ್ರಹ್ಮಣ್ಯಂ ಶೆಟ್ಟಿ, ಎಂ. ಸಚಿನ್, ಕೆ.ಎಂ. ಸುಮಿತ್ರಮ್ಮ, ಎಚ್.ಎಂ. ಗೌರಮ್ಮ, ಶಾರದಾ, ಅನ್ನಪೂರ್ಣಾ, ಅಂಬಿಕಾ, ಜಗನ್, ಜ್ಯೋತಿ, ತ್ರಿಲೋಕನಾಥ ಎಚ್.ಎಂ. ಲೋಹಿತ್‌ಕುಮಾರ್, ಶಶಿರೇಖಾ, ದೀಪು, ಶ್ವೇತಾ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement