ಶ್ರೀಧರಗಡ್ಡೆ ಗ್ರಾಮದಲ್ಲಿ ರಾಜ್ಯೋತ್ಸವ ಆಚರಣೆ
ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೂಪರ್ ಸ್ಟಾರ್ ಕೃಷ್ಣ-ಮಹೇಶ್ ಬಾಬು ಅಭಿಮಾನಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಂಧ್ರದ ಕರ್ನೂಲ್ ಜಿಲ್ಲೆಯ ಹೊಳಲುಗುಂದಿ ಗ್ರಾಮದ ಸೂಪರ್ ಸ್ಟಾರ್ ಕೃಷ್ಣ-ಮಹೇಶ್‌ಬಾಬು ಅಭಿಮಾನಿಗಳ ಸಂಘದಿಂದ ರಾಜ್ಯೋತ್ಸವದ ನಿಮಿತ್ತ ಕನ್ನಡ ವ್ಯಾಕರಣದ ವಿವಿಧ ನಕಾಶೆಗಳು, ವಿಜ್ಞಾನದ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಸಿ.ಹೇಮರೆಡ್ಡಿ, ಸಿ.ಚರಣ್ ಅವರು, ಶಾಲೆಯ ಉತ್ತಮ ಶಿಕ್ಷಕರಾದ ನಾಗಪ್ಪ ಗುಡ್ಡದ, ಪಿ.ಗಾಯಿತ್ರಿ, ಎಸ್. ಮಂಗಳಮ್ಮ, ಎಂ.ಶಿವಮ್ಮ, ಶಿವಗಂಗಾ, ಲಕ್ಷ್ಮಿ, ಎಂ.ಕೌಸರ್‌ಬೇಗಂ, ಬಿ. ನೇತ್ರಾವತಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಕನ್ನಡ ಭುವನೇಶ್ವರಿ, ಬಸವಣ್ಣ, ಮಾದರ ಚೆನ್ನಯ್ಯ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ ದೇವಿ, ಸರ್ ಎಂ. ವಿಶ್ವೇಶ್ವರಯ್ಯ ಅವರುಗಳ ಛದ್ಮವೇಷಗಳನ್ನು ಧರಿಸಿದ ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ-ಪಥಸಂಚಲನ ನಡೆಸಲಾಯಿತು. ಶಾಲಾ ಮುಖ್ಯಸ್ಥ ಎಂ.ಹನುಮಪ್ಪ, ಮುಖ್ಯ ಶಿಕ್ಷಕ ಎ. ಬಸವರಾಜ್, ಸಂಘದ ಸಿದ್ದಬಸಪ್ಪ, ಆರ್. ಶರಣಪ್ಪ, ಕೋಟೆ ಬಸವರಾಜ್, ಜಿ. ಕಲ್ಯಾಣಪ್ಪ, ಎಂ. ಗುರುಸಿದ್ದಪ್ಪ, ಎಸ್.ಪಿ. ಶಂಭನಗೌಡ ಇದ್ದರು.