ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸ್ಪರ್ಧಾತ್ಮಕ ವಿಷಯಕ್ಕೆ ನವ್ಯ ಬರಹಗಾರರು ಸ್ಪಂದಿಸಿ

Vishwanath S
Updated On : 5 Nov 2013, 11:21 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 4
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿನ ತಲ್ಲಣಗಳಿಗೆ ನವ್ಯ ಬರಹಗಾರರು ಸ್ಪಂದಿಸಬೇಕಿದೆ ಎಂದು ಸಾಹಿತಿ ಎಚ್. ಶೇಷಗಿರಿರಾವ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಜಿಪಿಜಿ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಹಿತಿ ಎಲ್. ಮಧುನಾಯ್ಕರ ಕಾದಂಬರಿ ಪಾತ್ರಧಾರಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಜನತೆ, ಶೋಷಿತ ವರ್ಗ, ಬಡವರ ನೋವುಗಳ ಪ್ರಜ್ಞೆ, ರೈತರ ಸಮಸ್ಯೆಗಳ ಕುರಿತು ಸಮಗ್ರ ಬೆಳಕು ಚೆಲ್ಲುವಂಥ ಸಾಹಿತ್ಯ ರಚನೆ ಅಗತ್ಯವಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಂಗ್ಲಭಾಷೆಯ ವ್ಯಾಮೋಹದಿಂದ ಹೊರ ಬಂದು ಕನ್ನಡ ಭಾಷೆ ಉಳಿಸುವಂತಹ ಕಾರ್ಯದಲ್ಲಿ ಎಲ್ಲರೂ ತೊಡಗಬೇಕೆಂದು ಕರೆ ನೀಡಿದರು.
ಕಾದಂಬರಿ ಕುರಿತು ಉಪನ್ಯಾಸಕ ಎಚ್.ಎಂ. ಗುರುಬಸವರಾಜಯ್ಯ ಮಾತನಾಡಿದರು. ಕರ್ನಾಟಕ ಏಕೀಕರಣ ಹೋರಾಟಗಾರ ಎಂ. ಚನ್ನಪ್ಪ, ಬೀಚಿ ಬಳಗದ ಅಧ್ಯಕ್ಷ ಎಂ. ತವನಪ್ಪ, ಕಾದಂಬರಿಕಾರ ಎಲ್. ಮಧುನಾಯ್ಕ, ಕಲಾ ಬಳಗದ ಬೀರಬ್ಬಿ ಬಸವರಾಜ, ಮುಖ್ಯ ಶಿಕ್ಷಕ ಪ್ರಕಾಶ ನಡುವಿನಹಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಅಕ್ಬರ್, ಕಸಾಪ ಅಧ್ಯಕ್ಷ ಸುರೇಶ ಅಂಗಡಿ ಉಪಸ್ಥಿತರಿದ್ದರು.
ಸಾಹಿತಿ ತೋ.ಮ. ಶಂಕ್ರಯ್ಯ ಅಧ್ಯಕ್ಷ ವಹಿಸಿದ್ದರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಎನ್.ಡಿ. ರೇಖಾ, ಸಾಹಿತಿಗಳಾದ ನಾಗರಾಜ ಮಲ್ಕಿ ಒಡೆಯರ್, ಎಲ್. ಮಧುನಾಯ್ಕ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಅನನ್ಯ ಸಂಗೀತ ಪಾಠ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಎಂ. ದಯಾನಂದ, ಕಸಾಪ ಕಾರ್ಯದರ್ಶಿ ಎಂ. ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅನಂತರ ಕವಿಗೋಷ್ಠಿ ಜರುಗಿತು. ಚಿತ್ತಾರ ನೃತ್ಯ ಶಾಲೆಯ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಪ್ರದರ್ಶಿಸಿದ ನೃತ್ಯೋತ್ಸವ ಜನಮನಸೂರೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement