ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಅಂತರ್ ಕಾಲೇಜು ಕ್ರೀಡಾಕೂಟ

Lingaraj Badiger
Updated On : 6 Nov 2013, 11:21 am

ಹೊಸಪೇಟೆ: ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಮತ್ತು ಸ್ಥಳೀಯ ವಿಜಯನಗರ ಮಹಾವಿದ್ಯಾಲಯ ಸಹಯೋಗದಲ್ಲಿ 3ನೇ ಅಂತರ್ ಮಹಾವಿದ್ಯಾಲಯದ ಕ್ರೀಡಾಕೂಟ ನ. 6 ಮತ್ತು 7ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವಿಜಯನಗರ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಎಸ್. ಪೊಲೀಸ್ ಪಾಟೇಲ್ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಮಂಜಪ್ಪ ಡಿ. ಹೊಸಮನಿ ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ವೀವಿ ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದ ಸ್ವಾಮಿ ಕ್ರೀಡಾಜ್ಯೋತಿ ಬೆಳಗಿಸುವರು. ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಪಥಸಂಚಲನ ನೆರವೇರಿಸುವರು ಎಂದು ವಿವರಿಸಿದರು. ನ. 7ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವೀವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅಧ್ಯಕ್ಷತೆ ವಹಿಸುವರು. ಕ್ರೀಡಾಕೂಟದಲ್ಲಿ ಒಟ್ಟು 96 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ಬಳ್ಳಾರಿ ಜಿಲ್ಲೆಯ 14 ಕಾಲೇಜುಗಳಿಂದ 130 ವಿದ್ಯಾರ್ಥಿಗಳು, 60 ವಿದ್ಯಾರ್ಥಿನಿಯರು, ಕೊಪ್ಪಳ ಜಿಲ್ಲೆಯ 12 ಕಾಲೇಜುಗಳಿಂದ 98 ವಿದ್ಯಾರ್ಥಿಗಳು, 30 ವಿದ್ಯಾರ್ಥಿನಿಯರು ಸೇರಿದಂತೆ 330 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇಸ್ಪೀಟ್ ಜೂಜಾಟ: ಐವರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ಮೋಕಾ ಪೊಲೀಸರು ದಾಳಿ ಮಾಡಿ, ಐವರನ್ನು ಬಂಧಿಸಿ, ರು. 1850 ವಶಪಡಿಸಿಕೊಂಡಿದ್ದಾರೆ. ಮೋಕಾ ನಗರದಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ರವಿ, ಶ್ರೀನಿವಾಸ, ಗುಂಡುಮಲ್ಲಿ, ಮಹದೇವ, ಎರ್ರಿಸ್ವಾಮಿಯನ್ನು ಬಂಧಿಸಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement