ಟಂಟಂ ಪಲ್ಟಿ: ಶಿಕ್ಷಕ ಸಾವು
ಮುನಿರಾಬಾದ್: ಇಲ್ಲಿನ ಸಮೀಪದ ಕಂಪಸಾಗರ ಬಳಿ ಟಂಟಂ ಪಲ್ಟಿಯಾದ ಪರಿಣಾಮ ಶಿವಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಸ್. ನಾಗರಾಜ್ ಕಿರೇಸುರ (28) ಸ್ಥಳದಲ್ಲೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಶಿಕ್ಷಕ ಎಸ್. ನಾಗರಾಜ್ ಹುಲಿಗಿಯಲ್ಲಿ ಮನೆ ಮಾಡಿದ್ದರು. ಅವರು ಮಂಗಳವಾರ ಎಂದಿನಂತೆ ಟಂಟಂ ವಾಹನದಲ್ಲಿ ಶಿವಪುರ ಗ್ರಾಮದಲ್ಲಿರುವ ಶಾಲೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ. ಮುನಿರಾಬಾದಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.