ನೇತ್ರ ತಪಾಸಣಾ ಶಿಬಿರ
ಕೂಡ್ಲಿಗಿ: ತಾಲೂಕಿನ ಜುಮ್ಮೋಬನಹಳ್ಳಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಕೊಂಡ್ಲಹಳ್ಳಿ ಎಆರ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನೇತ್ರ ತಜ್ಞ ಡಾ. ನಾಗರಾಜ ನೇತ್ರ ತಪಾಸಣೆ ನಡೆಸಿದರು. ಹುಡೇಂ ಆಸ್ಪತ್ರೆ ವೈದ್ಯ ಡಾ.ಟಿ. ಶಿವಲಿಂಗಪ್ಪ, ತಿಪ್ಪೇಸ್ವಾಮಿ, ಜಾಜೂರು ಭದ್ರಣ್ಣ ಇದ್ದರು. 150ಕ್ಕೂ ಅಧಿಕ ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು.