ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ

Lingaraj Badiger
Updated On : 6 Nov 2013, 11:26 am

ಬಳ್ಳಾರಿ: ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ  ಸ್ವಚ್ಚತಾ ಕಾರ್ಯಕೈಗೊಂಡು, ಮುಂಜಾಗ್ರತೆ ವಹಿಸಬೇಕು ಎಂದು ತಾಪಂ ಅಧ್ಯಕ್ಷ ಪಿ. ಗಾದಿಲಿಂಗಪ್ಪ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಳೆಯಾಗಿದ್ದು, ಸ್ಚಚ್ಛತಾ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು. ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಿಕೆ, ಸೇರಿದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಚಿಕಿತ್ಸೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮಕೈಗೊಳ್ಳಬೇಕು ಎಂದರು.
ಅನಧಿಕೃತವಾಗಿ ಯಾರೂ ವಿದ್ಯುತ್ ಸಂಪರ್ಕ ಹೊಂದಬಾರದು. ಪಿಡಿಓಗಳಿಗೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಯಾರಾದರು ಅನಧಿಕೃತ ಸಂಪರ್ಕ ಹೊಂದಿದ್ದಲ್ಲಿ ಕೆಪಿಟಿಸಿಲ್‌ನ ವಿಜಿಲೆನ್ಸ್ ತಂಡದವರು ಕಾನೂನಿನ ಕ್ರಮ ತೆಗೆದುಕೊಂಡಲ್ಲಿ ಪಿಡಿಓಗಳೆ ನೇರ ಜವಾಬ್ದಾರರನ್ನಾಗಿಸಲಾಗುವುದು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೇಣಿ ಬಸಪ್ಪ ಅವರು ಪ್ರಗತಿ ಪರಿಶೀಲನೆ ನಡೆಸಿ, ನಿಧಾನಗತಿಯಲ್ಲಿ ನಡೆಯುತ್ತಿರುವ ನಿರಂತರ ಜ್ಯೋತಿ ಕಾಮಗಾರಿಗಳು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ನೀರಿನ ಮೀಟರ್ ಅಳವಡಿಕೆಯಲ್ಲಿ ತೊಂದರೆಗಳಿದ್ದಲ್ಲಿ ಕೆಪಿಟಿಸಿಲ್ ಅಧಿಕಾರಿಗಳು ಕೂಡಲೆ ಸ್ಪಂದಿಸಿ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಬೇಸಿಗೆ ಕಾಲದಲ್ಲಿ ಶುದ್ದ ಕುಡಿಯುವ ನೀರಿನ ಸರಬರಾಜಿಗಾಗಿ ದುರಸ್ತಿಯಲ್ಲಿರುವ ನೀರಿನ ಫಿಲ್ಟರ್‌ಗಳನ್ನು ಕೊಡಲೆ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮವಹಿಸಬೇಕು. ರಸ್ತೆ ಕಾಮಗಾರಿಯನ್ನು ಉತ್ತಮ ಮಟ್ಟದಲ್ಲಿ ಕೈಗೊಳ್ಳಬೇಕು. ಕಣೆಕಲ್ ರಸ್ತೆ ಸೇರಿದಂತೆ ಎರ್ರಗುಡಿ-ಸಿಡಗಿನಮೊಳ-ವೈ. ಬೂದಿಹಾಳ್ ರಸ್ತೆಗಳಿಗೆ ಡಾಂಬರಿಕರಣ ಕಾರ್ಯ ಕೈಗೊಳ್ಳಬೇಕು. ಅಕ್ಷರದಾಸೋಹದ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪ. ಜಾತಿಪಂಗಡದ ರೈತರಿಗೆ ಎನ್,ಆರ್.ಇ.ಜಿಯಲ್ಲಿ ತೆಂಗಿನ ಸಸಿಗಳನ್ನು ವಿತರಿಸುವಂತೆ ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಉಪಾಧ್ಯಕ್ಷೆ ಮರೆಮ್ಮ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement