ಹಂಪಿ: ಭಕ್ತಿ ಭಾವನಾ ಸಾಂಸ್ಕೃತಿಕ ಕಾರ್ಯಕ್ರಮ
ಹೊಸಪೇಟೆ: ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಡ್ಡಿರಾಂಪುರ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ಆಶ್ರಯದಲ್ಲಿ ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತಿ ಭಾವನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಗೀತ ಕಲಾವಿದರಾದ ಎಚ್. ಪೂರ್ಣವನಂತ್ ಕುಮಾರ್ ಹಾಗೂ ಡಬ್ಲ್ಯೂ ರಾಧಾ ಶ್ರೀಧರ್ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮಲಪನಗುಡಿಯ ದಾಸರ ಯಲ್ಲಪ್ಪ ತತ್ವ ಪದಗಳನ್ನು ಹಾಡಿದರು. ಹೊಸಪೇಟೆಯ ಕೇಶವ ಕೊಳಲು ನುಡಿಸಿದರು. ಮೂರ್ತಾಚಾರ್ ಹಾರ್ಮೋನಿಯಂ, ಶ್ರೀಧರ್ ತಬಲಾ ಸಾಥ್ ನೀಡಿದರು. ಹೊಸಪೇಟೆ ಡಿವೈಎಸ್ಪಿ ಡಿ.ಡಿ. ಮಾಳಗಿ, ಸಿಪಿಐ ಹನುಮಂತಪ್ಪ, ಸ್ಥಳೀಯ ಮುಖಂಡರಾದ ಸಾಯಿನಾಥ, ಶಿವಪ್ರಸಾದ್, ಶಿವಕುಮಾರ್ ಹಾಗೂ ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಾಮಿಸಿಂಗ್, ಮುಖಂಡರಾದ ಕೆ. ಷಣ್ಮುಖಗೌಡ, ಕೆ. ತೋಟಪ್ಪ, ಪಂಪಾಪತಿ, ತಿಮ್ಮಪ್ಪ, ಬಿ.ಜಿ. ಶ್ರೀನಿವಾಸ, ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ಅಂಗಡಿ ವಾಮದೇವ ಇತರರು ಭಾಗವಹಿಸಿದ್ದರು. ಅಂಗಡಿ ವಾಮದೇವ ಸ್ವಾಗತಿಸಿದರು. ಎ. ದೊಡ್ಡಬಸಪ್ಪ ವಂದಿಸಿದರು.