ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕುರುಬ ಸಮಾಜದವರು ಸಂಘಟಿತರಾಗಬೇಕು

Vishwanath S
Updated On : 7 Nov 2013, 11:12 am

ಕೊಟ್ಟೂರು: ಕುರುಬ ಜನಾಂಗದವರ ಮೇಲೆ ಹಿಂದೆಂದಿಗಿಂತ ಈಗ ಬಹಳಷ್ಟು ಜವಾಬ್ದಾರಿಗಳಿದ್ದು, ಜನತೆ ಎದುರು ನೋಡುವ ನಿಟ್ಟಿನತ್ತ ಕುರುಬ ಸಮಾಜ ಬಾಂಧವರು ಸಂಘಟಿತರಾಗಬೇಕಿದೆ. ಸಂಘದ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆ ಎಂದು ಕೂಡ್ಲಿಗಿ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷ ಕೆ.ಎಂ. ಕೆಂಚಲಿಂಗಪ್ಪ ಹೇಳಿದರು.
ಇಲ್ಲಿನ ಎಪಿಎಂಸಿ ಮಾರ್ಕೆಟ್ ಯಾರ್ಡ್‌ನಲ್ಲಿರುವ ಮೂಗಬಸವೇಶ್ವರ ಟ್ರೇಡರ್ಸ್‌ನಲ್ಲಿ ನಡೆದ ಕನಕ ಜಯಂತಿ ನಿಮಿತ್ತ ಪೂರ್ವಭಾವಿ ಸಭೆ ಮತ್ತು ಕೂಡ್ಲಿಗಿ ತಾಲೂಕು ಕುರುಬ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಅನಂತರ ಅವರು ಮಾತನಾಡಿದರು.
ಪಟ್ಟಣದಲ್ಲಿ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇದಕ್ಕೆ ಎಲ್ಲ ಬಗೆಯ ತಯಾರಿಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳೋಣ ಎಂದರು.
ಸಮಾಜದ ಮುಖಂಡ ಎ. ನಂಜಪ್ಪ ಮಾತನಾಡಿದರು. ವಕೀಲ ಕೆ. ಸಿದ್ದಪ್ಪ, ಚೌಟ್ಗಿ ಕೊಟ್ರೇಶ್, ಕಾನಾಮಡುಗು ನಾಗರಾಜ, ಕೆ. ಲೋಕಪ್ಪ, ಪಪಂ ಸದಸ್ಯ ಪೂಜಾರ ನಾಗಪ್ಪ, ಎಂ.ಕೆ. ಜಲಪೂರ್, ಭಂಡಾರಿ ನೀಲಗಿರಿಯಪ್ಪ, ದೂಪದಹಳ್ಳಿ ಅಣ್ಣಪ್ಪ, ಉಮೇಶ್, ಬೋರನಹಳ್ಳಿ ಮೂಗಪ್ಪ, ಈಶಪ್ಪ, ಭರಮಪ್ಪ, ವೆಂಕಟೇಶ್, ಉಜ್ಜಿನಿ ರುದ್ರಪ್ಪ ಇದ್ದರು. ಮದ್ದಾನಪ್ಪ ಸ್ವಾಗತಿಸಿದರು. ಕೆ. ಹಾಲೇಶ್ ವಂದಿಸಿದರು.
ಪದಾಧಿಕಾರಿಗಳು: ಅಧ್ಯಕ್ಷರಾಗಿ ಕೆ.ಎಂ. ಕೆಂಚಲಿಂಗಪ್ಪ, ಗೌರವ ಅಧ್ಯಕ್ಷರಾಗಿ ಬಿ. ಭರಮಪ್ಪ, ಉಪಾಧ್ಯಕ್ಷರಾಗಿ ಬಿ. ತಿಪ್ಪೇಸ್ವಾಮಿ ಖಾನಾಹೊಸಹಳ್ಳಿ, ಹುಚ್ಚಪ್ಪ ದೂಪದಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಭಂಡಾರಿ ಸಿದ್ದೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಮೂಗಪ್ಪ ಉಜ್ಜಿನಿ, ಬಿ. ಉಮೇಶ್ ನಾಯಕನಹಳ್ಳಿ, ಎಂ. ಬಸವರಾಜ್ ಬೋಜರನಹಳ್ಳಿ, ಬಸವರಾಜ್ ಬಡೇಲಡಕು. ಎನ್.ಎಂ. ರಾಜಪ್ಪ ನಿಂಬಳಗೇರಿ, ಸಿದ್ದೇಶ್ ಕಾಳಾಪುರ, ಖಜಾಂಚಿಯಾಗಿ ಎ. ಬಸವರಾಜ್ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement