ದಿವಾಕರ ಬಾಬು ಹುಟ್ಟುಹಬ್ಬ: ಹಣ್ಣು ವಿತರಣೆ
ಬಳ್ಳಾರಿ: ಮಾಜಿ ಸಚಿವ ಎಂ. ದಿವಾಕರಬಾಬು ಅವರ 57ನೇ ಹುಟ್ಟುಹಬ್ಬದ ನಿಮಿತ್ತ ವಿವಿಧ ಸಂಘಟನೆಗಳು, ಮಹಾನಗರ ಪಾಲಿಕೆ ಸದಸ್ಯರು, ಅಭಿಮಾನಿಗಳು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಹಾಗೂ ಅನ್ನ ಸಂತರ್ಪಣೆ, ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಕಾಂಗ್ರೆಸ್ ಮುಖಂಡರಾದ ಎಂ. ವಿಜಯ್, ಡಿ. ಸೂರಿ, ಪಾಲಿಕೆ ಸದಸ್ಯರಾದ ಬಿ. ಕುಮಾರಸ್ವಾಮಿ, ಬಿ.ಕೆ. ಕೆರೆಕೋಡಪ್ಪ, ಎಂ. ವಿವೇಕಾನಂದ, ಜಿ. ವೆಂಕಟರಮಣ, ಷಾಷಾಬ್, ಉಮಾದೇವಿ, ಸುಶೀಲಾಬಾಯಿ, ಬಿ. ಬಸವರಾಜ್, ಅಶೋಕ್‌ಕುಮಾರ್, ನಾಗಮ್ಮ, ಮರಿದೇವಯ್ಯ, ಎಂ. ಶರ್ಮಾಸ್, ಸುಧಾಕರ ದೇಸಾಯಿ, ಜೆ. ಜಯಲಲಿತಾ, ಐ. ದಿವ್ಯಕುಮಾರಿ, ಲಕ್ಷ್ಮಿದೇವಿ, ಕೆ. ರೇಣುಕಾ, ಚಂದ್ರಕಲಾ, ಪಿ. ಅಕ್ಬರ್, ನಸ್ರೀನಾಬೇಗಂ, ಐ. ರಿಜ್ವಾನಾಬೇಗಂ, ಕೆ. ನಾಗರಾಜ್, ಮಾಲನ್‌ಬೀ, ಎಂ. ರಮೇಶ್, ಡಿ. ಲಕ್ಷ್ಮೀ, ಯಲ್ಲಮ್ಮಾ ಹಾಗೂ ಕಾಂಗ್ರೆಸ್ ಮುಖಂಡರು ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಂಡಿಹಟ್ಟಿ ಪ್ರದೇಶದಲ್ಲಿ ಪಾಲಿಕೆ ಸದಸ್ಯ ಕೆ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಕೆ. ಗಾದಿಲಿಂಗಪ್ಪ ಹಾಗೂ ದಿವಾಕರಬಾಬು ಅಭಿಮಾನಿಗಳಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಕಾಂಗ್ರೆಸ್ ಮುಖಂಡರಾದ ಹನುಮ ಕಿಶೋರ್, ಪಾಲಿಕೆ ಸದಸ್ಯರು, ಎಂ. ವಿವೇಕಾನಂದ, ಕಂದುಕೂರಿ ರಾಮುಡು, ಪೇಟಯ್ಯ ಇತರರು ರಕ್ತದಾನ ಮಾಡಿದರು. 30ನೇ ವಾರ್ಡ್‌ನ ಪಾಲಿಕೆ ಸದಸ್ಯ ಎಂ. ರಮೇಶ್, ಶೇಖರ್, ಸೂರಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು ಜನ್ಮದಿನಾಚರಣೆಯಲ್ಲಿ ಕೆಕ್ ಕತ್ತರಿಸಿ ಸಿಹಿ ಹಂಚಿದರು. ನಗರದ ಅನಂತಪುರ ರಸ್ತೆಯ ಸಾಯಿಬಾಬಾ ದೇವಸ್ಥಾನ, ಮಿಲ್ಲರ್‌ಪೇಟೆ ಗಂಗಪ್ಪ ಜಿನ್, ಕೌಲ್‌ಬಜಾರ್, ರೇಡಿಯೋ ಪಾರ್ಕ್‌ನ ಸಾಯಿಬಾಬಾ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ನವ ಜೀವನ, ಮದರ್ ಥೆರೇಸಾ, ಕುಷ್ಟ ರೋಗಿಗಳಿಗೆ ಅನ್ನದಾನ ಏರ್ಪಡಿಸಿದ್ದರು. ವಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲ ವಿತರಿಸಿದರು.