ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಂಗಾರ ಸರ ದೋಚಿ ಪರಾರಿ

Vishwanath S
Updated On : 10 Nov 2013, 12:02 pm

ಕೂಡ್ಲಿಗಿ: ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ 6-40ಕ್ಕೆ ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಹಿರೇಕುಂಬಳಗುಂಟೆ ಉಮೇಶ್ ಅವರ ಪತ್ನಿ ಜರೀನಾ ಯಂಡಿಗೇರಿ ಶನಿವಾರ ಬೆಳಗ್ಗೆ ವಾಯುವಿಹಾರ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಾಗರ ದಾಬಾ ಹತ್ತಿರ ಜರೀನಾ ಕೊರಳಲ್ಲಿದ್ದ ರು. 58 ಸಾವಿರ ಮೌಲ್ಯದ ಮೂರ್ನಾಲ್ಕು ತೊಲೆ ಬಂಗಾರದ ಮಾಂಗಲ್ಯ ಸರ ಅಪಹರಿಸಿಕೊಂಡು ಸಿನಿಮೀಯ ರೀತಿ ಪರಾರಿಯಾಗಿದ್ದು, 9 ಗ್ರಾಂ ಮಾಂಗಲ್ಯ ಸರದ ಡಾಲರ್ ಮಾತ್ರ ಉಳಿದುಕೊಂಡಿದೆ. ಘಟನೆಯಿಂದ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಬಂಗಾರದ ಸರ ಕಳೆದುಕೊಂಡಿರುವ ಜರೀನಾ ಕೂಡ್ಲಿಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸರ ಅಪಹರಣ ಮಾಡಿದ ದುಷ್ಕರ್ಮಿಗಳ ಚಹರೆ ಬಗ್ಗೆ ಮಾಹಿತಿ ನೀಡಿದ್ದು, ಕೂಡ್ಲಿಗಿ ಡಿವೈಎಸ್‌ಪಿ ಗಜಕೋಶ್, ಸಿಪಿಐ ಕಲ್ಲೇಶಪ್ಪ, ಪಿಎಸ್‌ಐ ಕೃಷ್ಣನಾಯ್ಕ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಕೂಡ್ಲಿಗಿ ಪಟ್ಟಣಕ್ಕೆ ಬರುವ ಅಪರಚಿತರ ಬೈಕ್ ಇತರೆ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಅಲ್ಲದೇ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಪಿಎಸ್‌ಐ ಕೃಷ್ಣನಾಯ್ಕ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement