ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸರ್ಕಾರ ಜನರ ಕಲ್ಯಾಣ ಮಾಡಲಿ

Lingaraj Badiger
Updated On : 11 Nov 2013, 12:13 pm

ಹೊಸಪೇಟೆ: ಮೂಢನಂಬಿಕೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳದೇ ಪಾರದರ್ಶಕ ಆಡಳಿತ ನೀಡುತ್ತ ಜನರ ಕಲ್ಯಾಣ ಮಾಡಬೇಕು ಎಂದು ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಸಂಗನಬಸವ ಮಹಾಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಅಹನಾ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿಯಮಿತ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು. ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಎನ್ನುವುದು ಮೊದಲು ಖಚಿತವಾಗಬೇಕು. ಬಲಿ ಕೊಡುವುದು, ಮಡೆಸ್ನಾನ ಇವು ಮೂಢನಂಬಿಕೆಗಳು ನಿಜ. ಆದರೆ, ಪಾದಪೂಜೆ, ಗುರುವನ್ನು ದೇವರೆಂದು ಭಾವಿಸುವುದು ಇವೆಲ್ಲ ನಂಬಿಕೆಗಳು.
ಇಂತಹವುಗಳನ್ನು ನಿಷೇಧಿಸುವುದರಿಂದ ಏನೋ ಸಾಧಿಸಿದಂತೆ ಆಗುವುದಿಲ್ಲ. ಸರ್ಕಾರದ ಆದ್ಯತೆ ಬಡವರಿಗೆ ರೇಷನ್ ಕಾರ್ಡ್ ನೀಡುವುದು. ಅವರ ಶ್ರೆಯೋಭಿವೃದ್ಧಿ ಚಿಂತಿಸುವುದಾಗಿದೆ ಎಂದು ಹೇಳಿದರು. ಅಹನಾ ಸೌಹಾರ್ದ ಸಂಸ್ಥೆ ಬಡವರ, ಮಧ್ಯಮ ವರ್ಗಕ್ಕೆ ಸಹಕಾರಿಯಾಗಿ ಬೆಳೆಯುವ ಮೂಲಕ ಜನೋಪಯೋಗಿ ಕಾರ್ಯ ಕೈಗೊಳ್ಳಲು ಮುಂದಾಗಲಿ. ಸಹಕಾರಿ ತತ್ವದ ಮೂಲಕವೇ ಎಲ್ಲರ ಶ್ರೇಯೋಭಿವೃದ್ಧಿ ಸಾಧ್ಯ ಎಂದರು. ಅಹನಾ ಸಂಸ್ಥೆ ಉಪಾಧ್ಯಕ್ಷ ಡಾ. ಬಿ. ವಿಶ್ವನಾಥ್ ದೀಪಾಲಿ ಮಾತನಾಡಿ, ಜನಸಾಮಾನ್ಯರ ದುಃಖ ದುಮ್ಮಾನ ಆಲಿಸಿ, ಗ್ರಾಹಕರ ಅಗತ್ಯಗಳನ್ನು ಪೂರೈಸಲು ಈ ಸಂಸ್ಥೆ ಜನ್ಮತಾಳಿದೆ ಎಂದರು.
ಅಭಿವೃದ್ಧಿಗೆ ನೆರವಾಗಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಮಂಟೆಲಿಂಗಾಚಾರ್ ಮಾತನಾಡಿ, ಬದ್ಧತೆ ಇರುವ ಜನರು ಒಂದೆಡೆ ಸೇರಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯು ಜನಸಾಮಾನ್ಯರ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ರೈತ ಮುಖಂಡ ಉಮೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಚೇರ್‌ಮನ್ ಕೆ. ವೀರಭದ್ರ, ಮುಖಂಡ ಸದ್ಯಜಾತ ಶಾಸ್ತ್ರೀ ಮಾತನಾಡಿದರು. ಮಾಜಿ ಸಚಿವ ಅಮರೇಗೌಡ ಭಯ್ಯಾಪುರ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಚಂದ್ರಪ್ಪ, ಅಹನಾ ನಿರ್ದೇಶಕ ಟಿ. ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು. ಅಕ್ಷತಾ ಪ್ರಾರ್ಥಿಸಿದರು. ಸಂಸ್ಥೆ ಚೇರ್‌ಮನ್ ಕೆ. ವೀರಭದ್ರ ಸ್ವಾಗತಿಸಿದರು.ಎಚ್.ಪಿ. ಕಲ್ಲಂಭಟ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಂಗನಬಸವ ಸ್ವಾಮೀಜಿ ಅಹನಾ ಷೇರುಗಳನ್ನು ಮತ್ತು ಲೋಗೋ ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement