ಅತಿಕ್ರಮಣ: 14 ಮನೆಗಳ ತೆರವು
ಬಳ್ಳಾರಿ: ಇಲ್ಲಿನ ಡಿಎಆರ್ ವಸತಿ ಗೃಹದ ಹಿಂದುಗಡೆ ಇರುವ ರಸ್ತೆ ಅತಿಕ್ರಮಣ ಮಾಡಿದ 14ಕ್ಕೂ ಹೆಚ್ಚು ಮನೆಗಳನ್ನು ಮಂಗಳವಾರ ತೆರವುಗೊಳಿಸಲಾಯಿತು. 15 ಅಡಿಗಳಷ್ಟು ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಪಾಲಿಕೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಬಿಸ್ವಾಸ್ ಅವರ ಆದೇಶದಂತೆ ಮಂಗಳವಾರ ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ ತೆರವು ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಬಿಸ್ವಾಸ್ ಭೇಟಿ ನೀಡಿ, ಪರಿಶೀಲಿಸಿದರು. ಗಾಂಧಿನಗರ ಪಿಎಸ್‌ಐ ಚಂದನ್‌ಗೋಪಾಲ್ ಹಾಗೂ ಡಿಎಆರ್ ವಾಹನ ತೆರವು ಕಾರ್ಯಾಚರಣೆ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು.