ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಕಾರ್ಯಕಾರಿಣಿ ಸಭೆ

Lingaraj Badiger
Updated On : 13 Nov 2013, 10:47 am

ಬಳ್ಳಾರಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ ಸಭೆ ನ. 13ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಸಭೆಗೆ ರಾಜ್ಯ ಘಟಕದ ಮುಖಂಡರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಜರಾಗಬೇಕು ಎಂದು ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ನಜೀರ್ ಪಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಅರ್ಜಿ ಆಹ್ವಾನ
ಕೊಟ್ಟೂರು: ರಾಜ್ಯ ನದಾಫ್, ಪಿಂಜಾರ್ ಸಂಘಟನೆಯ ಕೊಟ್ಟೂರು ಘಟಕದಿಂದ ನದಾಫ್ ಪಿಂಜಾರ್ ಸಮಾಜದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಶಿಷ್ಯ ವೇತನ ನೀಡಲಾಗುವುದು. 2013-14ನೇ ಸಾಲಿನಲ್ಲಿ ಡಿಇಡಿ, ನರ್ಸಿಂಗ್ ಕೋರ್ಸ್, ಡಿ. ಫಾರ್ಮ್, ಫಾರ್ಮ್, ಐಟಿಐ, ಡಿಪ್ಲೋಮಾ, ಬಿಬಿಎ, ಬಿಬಿಎಂ, ಬಿಸಿಎ, ಫಿಜಿಯೋ ಥೆರಪಿ, ಬಿಎಂಎಂಎಸ್, ಬಿಯುಎಂಎಸ್, ಬಿಎಚ್‌ಎಂಎಸ್, ಬಿಡಿಎಸ್, ಎಂಬಿಬಿಎಸ್, ಬಿಇ, ಎಂಇ, ಎಲ್‌ಎಲ್‌ಬಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ನ. 30ರ ಒಳಗಾಗಿ ತಾಲೂಕು ಅಧ್ಯಕ್ಷ ಪಿ. ತಾಜ್‌ಪೀರ್ 9972091015, ತಾಲೂಕು ಗೌರವಾಧ್ಯಕ್ಷ ಕೆ.ಪೀರ್‌ಸಾಬ ಮೊ 9986178719, ತಾಲೂಕು ಪ್ರಧಾನ ಕಾರ್ಯದರ್ಶಿ   ಎಸ್.ಪಿ. ಮುಸ್ತಫಾ ಮೊ. 99166622428ಗೆ ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದಾಗಿದೆ ಎಂದು ನದಾಫ್ ಪಿಂಜಾರ ಸಂಘಟನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ
ಹೊಸಪೇಟೆ: ಎಂಜಿನಿಯರ್ ವಿದ್ಯಾರ್ಥಿಯೋರ್ವ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಮರಾವತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಚಿಕ್ಕಮಂಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಬೆಲನಹಳ್ಳಿ ತಾಂಡಾದ ನಿವಾಸಿ ನರಸಿಂಹ ನಾಯ್ಕ (25) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದಾನೆ. ಐದು ತಿಂಗಳಿಂದ ತೋರಣಗಲ್‌ನ ಜಿಂದಾಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾ, ನಗರದ ಎಂಜಿನಿಯರಿಂದ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಆದರೆ ಜಿಗುಪ್ಸೆ ಹೊಂದಿ ತನ್ನ ರೂಂನಲ್ಲಿ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನಕ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ
ಕೂಡ್ಲಿಗಿ: ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಹಸೀಲ್ದಾರ್ ಜವರೇಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಕನಕ ಜಯಂತಿ ಪೂರ್ವಭಾವಿ ಸಭೆ ಜರುಗಿತು.
ನ. 20ರಂದು ಇಲ್ಲಿನ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಅದ್ಧೂರಿ ಕನಕ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು. ತಾಲೂಕಾಡಳಿತ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ನ. 20ರಂದು ಬೆಳಗ್ಗೆ 9ಕ್ಕೆ ಪಟ್ಟಣದ ಗಾಂಧೀಜಿ ಚಿತಾಭಸ್ಮ ಸ್ಮಾರಕ ಬಳಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾನಪದ ವಾದ್ಯ, ಕಲಾತಂಡಗಳಿಂದ ಮೆರವಣಿಗೆ ನಡೆಯುವುದು. ಸಾಧನೆ ಮಾಡಿದ ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಕನಕದಾಸರ ಕುರಿತು ವಿಶೇಷ ಉಪನ್ಯಾಸಕ್ಕೆ ಒತ್ತು ನೀಡುವುದು ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ, ತಾಪಂ ಇಒ ಡಿ.ಆರ್. ಶಿವಪ್ಪ, ಕುರುಬರ ಸಂಘದ ತಾಲೂಕಾಧ್ಯಕ್ಷ ತಾಯಕನಹಳ್ಳಿ ಕೆಂಚಲಿಂಗಪ್ಪ, ಉಪಾಧ್ಯಕ್ಷ ಎಲ್. ಹುಚ್ಚಪ್ಪ, ಬಡೆಲಡುಕು ನಿಂಗಪ್ಪ, ಉಜ್ಜಿನಿ ರುದ್ರಪ್ಪ, ರಾಂಪುರ ಸಿದ್ಧೇಶ್, ಕಾನಹೊಸಹಳ್ಳಿ ನಾಗೇಶ್, ಎನ್. ಮುದ್ದಪ್ಪ, ಹಿರೇಕುಂಬಳಗುಂಟೆ ಉಮೇಶ್, ಬಿ. ಮರಿಯಪ್ಪ, ಪರಶುರಾಮ, ಶಿವರಾಜ, ರಾಘವೇಂದ್ರ, ದೂಪದಹಳ್ಳಿ ಅಣ್ಣಪ್ಪ, ಉಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement