ಕೇಬಲ್ ಕಳ್ಳತನ: ಆರೋಪಿ ಜೈಲಿಗೆ
ಹೂವಿನಹಡಗಲಿ: ಜಮೀನುಗಳಲ್ಲಿ ಅಳವಡಿಸಲಾಗಿದ್ದ ಮೋಟಾರ್ ಕೇಬಲ್ ಕಳ್ಳತನ ಮಾಡುತ್ತಿದ್ದ ಗುರ್ಯಾನಾಯ್ಕನಿಗೆ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸುಧೀಶ ರಾಜಾರಾಮ್ ಪರದೇಶಿಗೆ 8 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ತಾಲೂಕಿನ ಹರವಿ ಸಿದ್ದಾಪುರದ ರೈತ ಷಣ್ಮುಖಪ್ಪ ದಾಸನಗೌಡ ಅವರ ಜಮೀನಿನಲ್ಲಿ ಹಾಕಲಾಗಿದ್ದ ಮೋಟಾರ್ ಕೇಬಲ್ ಕಳ್ಳತನ ಮಾಡಿ, ಸುಟ್ಟು ಅದರೊಳಗಿನ ತಾಮ್ರದ ತಂತಿಯನ್ನು ತೆಗೆದು ಮಾರಾಟ ಮಾಡಲು ಹೋಗುತ್ತಿದ್ದ ವೇಳೆ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.
ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸರ್ಕಾರದ ಪರವಾಗಿ ಜಗದೀಶ ಬಿಸಿರೊಟ್ಟಿ ವಾದ ಮಂಡಿಸಿದ್ದರು.