ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅದ್ಧೂರಿ ಕನಕ ಜಯಂತಿ ಆಚರಿಸಲು ನಿರ್ಧಾರ

Lingaraj Badiger
Updated On : 14 Nov 2013, 11:14 am

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ನ. 20ರಂದು ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಬುಧವಾರ ತಾಪಂ ಸಭಾಂಗಣದಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.
ಅಂದು ಬೆಳಗ್ಗೆ 9ಕ್ಕೆ ತಹಸೀಲ್ದಾರ್ ಕಚೇರಿ ಬಳಿಯ ಹಗರಿ ಆಂಜನೇಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಕನಕದಾಸರ ಭಾವಚಿತ್ರದ ಪೂಜೆ ನೇರವೇರಿಸಿದ ಬಳಿಕ ಗಂ.ಭೀ. ಸರ್ಕಾರಿ ಪದವಿಪೂರ್ವ ಕಾಲೇಜ್ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲು ಹಾಗೂ  ಡೊಳ್ಳು, ಸಮಾಳ, ತಾಸೀ ಸೇರಿದಂತೆ ವಿವಿಧ ವಾದ್ಯ ಪರಿಕರಗಳ ಕಲಾವಿದರ ತಂಡಗಳನ್ನು ಆಹ್ವಾನಿಸಲು,  ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಸಭೆ ಒಪ್ಪಿಗೆ ಸೂಚಿಸಿತು. ನಿತೀಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್. ಭೀಮಾನಾಯ್ಕ, ತಾಪಂ ಉಪಾಧ್ಯಕ್ಷೆ ನಾಗರತ್ನಮ್ಮ, ಬೆಣಕಲ್ ಪ್ರಕಾಶ್, ಸದಸ್ಯ ಉಪ್ಪಾರ ಬಾಲಪ್ಪ, ಎಪಿಎಂಸಿ ಅಧ್ಯಕ್ಷ ಟಿ. ಬುಳ್ಳಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಬಿ.ಜಿ. ಚಂದ್ರಪ್ಪ, ಗೌರವಾಧ್ಯಕ್ಷ ಜಳಕಿ ಗುರುಬಸಪ್ಪ, ಮುಟುಗನಹಳ್ಳಿ ಕೊಟ್ರೇಶ್, ವರದಾಪುರ ಕುಮಾರ್, ಎಪಿಎಂಸಿ ಸದಸ್ಯ ಕೆ.ಎಂ. ಗಂಗಾಧರ, ಕನಕ ಯುವಸೇನೆ ಅಧ್ಯಕ್ಷ ದೊಡ್ಡಬಸಪ್ಪ, ಕೊಗಳಿ ಸಿದ್ದಪ್ಪ, ಬಿ.ಕೆ. ಬಸವರಾಜ, ಆರ್. ವೆಂಕಟೇಶ, ಎಚ್. ದೇವೇಂದ್ರಪ್ಪ, ಗೋಣೆಪ್ಪ, ಮರಿ ರಾಮಪ್ಪ, ಸಿಎಂ ರಾಮಣ್ಣ, ತಾಪಂ ಇಒ ಬಿಎಂಎಸ್ ವೀರಯ್ಯ, ಪರಮೇಶ್ವರಪ್ಪ, ಎಇಇ ಗುರುಬಸಪ್ಪ ಇದ್ದರು.
--
ಸಂದರ್ಶನ ಮುಂದೂಡಿಕೆ
ಹೊಸಪೇಟೆ: ಹಂಪಿ ಕನ್ನಡ ವಿವಿ ಮಹಿಳಾ ಅಧ್ಯಯನ ಕೇಂದ್ರಕ್ಕೆ ಸಂಬಂಧಿಸಿದಂತೆ ಯುಜಿಸಿ ಯೋಜನಾ ಭಾಗವಾಗಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ನ. 16ರಂದು ನಡೆಯಬೇಕಿದ್ದ ನೇಮಕಾತಿ ಸಂದರ್ಶನ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಸಂದರ್ಶನ ದಿನಾಂಕವನ್ನು ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಂಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement