ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗ್ರಾಪಂ ಸದಸ್ಯನ ಮೇಲೆ ಹಲ್ಲೆ: ದೂರು

Lingaraj Badiger
Updated On : 14 Nov 2013, 11:14 am

ಹಗರಿಬೊಮ್ಮನಹಳ್ಳಿ: ಕೃಷಿ ಇಲಾಖೆ ಕಚೇರಿಗೆ ತಡೆಗೋಡೆ ನಿರ್ಮಿಸುವ ಕಾಮಗಾರಿ ವಿಚಾರವಾಗಿ ಚಿಂತ್ರಪಳ್ಳಿ ಗ್ರಾಪಂ ಸದಸ್ಯ ಸಂಪತ್‌ಕುಮಾರ್ ನಾಯ್ಕ ಮೇಲೆ ಪಟ್ಟಣದ ಭೋವಿ ಕಾಲೋನಿ ವಾಸಿ ಬೋವಿ ಶಾಂತಪ್ಪ ಹಲ್ಲೆ ಮಾಡಿದ್ದಾನೆ ಎಂದು ಸಂಪತ್‌ಕುಮಾರ್ ನಾಯ್ಕ ದೂರು ನೀಡಿದ್ದಾರೆ.
ರು. 3 ಲಕ್ಷ ವೆಚ್ಚದಲ್ಲಿ ಕೃಷಿ ಇಲಾಖೆ ಕಚೇರಿಗೆ ತಡೆಗೋಡೆ ಕಟ್ಟಲು ಅನುದಾನ ಬಿಡುಗಡೆಯಾಗಿತ್ತು. ಸಂಪತ್‌ಕುಮಾರ್ ನಾಯ್ಕ ಬುಧವಾರ ಕಾಮಗಾರಿ ಕೈಗೊಂಡಿದ್ದರು. ನಮ್ಮ ಏರಿಯಾದಲ್ಲಿನ ಕಾಮಗಾರಿ ನಿರ್ಮಾಣವನ್ನು ನೀನು ಮಾಡಬಾರದೆಂದು ತಕರಾರು ತೆಗೆದ ಶಾಂತಪ್ಪ ಸಂಪತ್‌ಕುಮಾರ್‌ನ ಕೈಗೆ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ್ದಾನೆ ಎಂದು ದೂರು ನೀಡಲಾಗಿದೆ. ಗಾಯಾಳು ನೀಡಿದ ದೂರಿನ್ವಯ ಆರೋಪಿ ಶಾಂತಪ್ಪನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅತ್ತ ಸಂಪತ್‌ಕುಮಾರ್ ನಾಯ್ಕ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಶಾಂತಪ್ಪ ಪ್ರತಿದೂರು ದಾಖಲಿಸಿದ್ದಾನೆ. ಗಾಯಾಳು ಸಂಪತ್‌ಕುಮಾರ್ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರ ನಡುವೆ ರಾಜಿ ಸಂಧಾನ ನಡೆಸಿದರೂ ರಾಜಿಯಾಗದ ಕಾರಣ ಶಾಂತಪ್ಪ ವಿರುದ್ಧ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement