ಮೊಹರಂ: ಮಸೀದಿ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ರಥಬೀದಿಯಲ್ಲಿ ಸಮುದಾಯ ಸಹಭಾಗಿತ್ವದಡಿ ನೂತನವಾಗಿ ನಿರ್ಮಿಸಿರುವ ಮೊಹರಂ ದೇವರ ಪ್ರತಿಷ್ಠಾಪಿಸುವ ಪೂಜಾ ಮಂದಿರಕ್ಕೆ ಶಾಸಕ ಎಸ್. ಭೀಮಾನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಸರ್ಕಾರದ ಅನುದಾನ ನಿರೀಕ್ಷಿಸುವ ಸಂಪ್ರದಾಯ ಗಟ್ಟಿಯಾಗಿ ಬೇರೂರಿದೆ. ಎಲ್ಲದಕ್ಕೂ ಸರ್ಕಾರದ ಕಡೆಗೆ ನಿರೀಕ್ಷೆ ಇಟ್ಟುಕೊಳ್ಳುವ ಬದಲಿಗೆ ಸಮಾಜದ ಸಣ್ಣ ಪುಟ್ಟ ಅಗತ್ಯ ಕಾರ್ಯಗಳನ್ನು ನಾವೇ ಪೂರೈಸಿಕೊಳ್ಳುವ ಗುಣ ಬೆಳೆಸಿಕೊಳ್ಳುವ ಮೂಲಕ ಸರ್ಕಾರದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು ಎಂದರು.
ಮಸೀದಿ ಮುತವಲಿ ಎಣ್ಣಿ ಇಬ್ರಾಹಿಂ, ಎಪಿಎಂಸಿ ಸದಸ್ಯ ಹೂಗಾರ ಮಲ್ಲಿಕಾರ್ಜುನ, ಸಿನಿಮಾ ಮಂಜಣ್ಣ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ, ಮಾಜಿ ಅಧ್ಯಕ್ಷ ಜಿ. ಹನುಮಂತಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಅರಸಿಕೇರಿ ಹನುಮಂತಪ್ಪ, ಮಡಿವಾಳರ ಮಂಜುನಾಥ, ವೆಲ್ಡಿಂಗ್ ಹುಲುಗಪ್ಪ, ಬಂಗಾರಿ ಗಾಳಿರಾಜ, ಬಡಲಡಿಕಿ ಕೃಷ್ಣಪ್ಪ, ದಾದಮ್ಮನವರ ರಾಜಪ್ಪ, ವಿ. ಸೋಮಪ್ಪ, ಎಣ್ಣಿ ಬಾಷಾ, ರಾಘವೇಂದ್ರ, ಹುಗ್ಗಿ ಭರಮಪ್ಪ, ಮಡಿವಾಳರ ಮಾರುತಿ, ಬಾರಿಕರ ಗಂಗಾಧರ ಸೇರಿದಂತೆ ಹಲವರು ಭಾಗವಹಿಸಿದ್ದರು.