ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುಟ್ಟ ವಿದ್ಯುತ್ ಪರಿವರ್ತಕ

Mainashree
Updated On : 15 Nov 2013, 11:16 am

ಹೂವಿನಹಡಗಲಿ: ಉತ್ತರ ಕರ್ನಾಟಕ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ವಿದ್ಯುತ್ ಪರಿವರ್ತಕ ಸುಟ್ಟು 3 ತಿಂಗಳು ಕಳೆದರೂ ಇಲ್ಲಿ ವರೆಗೂ ದುರಸ್ತಿ ಕಾಣದೇ ಕಾಲುವೆಗಳು ಬತ್ತಿ ಹೋಗಿವೆ.
ವಿದ್ಯುತ್ ಪರಿವರ್ತಕ ಸುಟ್ಟು 3 ತಿಂಗಳು ಕಳೆಯುತ್ತ ಬಂದರೂ ಇಲ್ಲಿಯವರೆಗೂ ಅಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಯೋಜನೆ ವ್ಯಾಪ್ತಿಯ ರೈತರು ಜಮೀನುಗಳನ್ನು ಬಿತ್ತನೆಗೆ ಹದ ಮಾಡಿಕೊಂಡಿದ್ದಾರೆ. ಆದರೆ, ಕಾಲುವೆಗಳಿಗೆ ನೀರೇ ಹರಿಯುತ್ತಿಲ್ಲ.  ಮಾಗಳ, ಕೆ. ಅಯ್ಯನಹಳ್ಳಿ, ಹೂವಿನಹಡಗಲಿ, ರಾಜವಾಳ ಮುಖ್ಯ ಕಾಲುವೆಗಳಿಗೆ ನೀರಿಲ್ಲದ ಪರಿಣಾಮ ರೈತರು ಬಿತ್ತನೆ ಮಾಡಿಲ್ಲ. ಈ ಕುರಿತು ಅನೇಕ ಬಾರಿ ರೈತರು ಕಚೇರಿಗೆ ಬಂದು ಮನವಿ ಮಾಡಿದ್ದರೂ ಅಧಿಕಾರಿಗಳು ತಿಂಗಳೊಳಗೆ ಟಿಸಿ ಹಾಕುತ್ತೇವೆ ಎಂದು ಹೇಳಿದ್ದು ಇಲ್ಲಿ ವರೆಗೂ ತಂದಿಲ್ಲ ಎಂಬುದು ನಾಗತಿ ಬಸಾಪುರ, ದೇವಗೊಂಡನಹಳ್ಳಿ, ಕೆ. ಅಯ್ಯನಹಳ್ಳಿ, ಮಾಗಳ, ರಾಜವಾಳ ರೈತರ ದೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement