ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 17 Nov 2013, 11:21 am

ಇಂದು ನಾಟಕ ಪ್ರದರ್ಶನ
ಬಳ್ಳಾರಿ: ಸ್ಥಳೀಯ ಟಿಪ್ಪು ಸುಲ್ತಾನ್ ಫೆಡರೇಷನ್‌ನಿಂದ ಹಜರತ್ ಟಿಪ್ಪು ಸುಲ್ತಾನ್ ಅವರ 264ನೇ ಜಯಂತಿ ನಿಮಿತ್ತ ನ. 17ರಂದು ಸಂಜೆ 6.30ಕ್ಕೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಪಾಯೋಜಿತ ಕಾರ್ಯಕ್ರಮದಡಿ ಈ ನಾಟಕ ಆಯೋಜಿಸಿದ್ದು, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಎ.ಕೆ. ಚೌದರಿ ಅಧ್ಯಕ್ಷತೆ ವಹಿಸುವರು. ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಕಪ್ಪಗಲ್ಲು ರಸೂಲ್‌ಸಾಬ್ ಮನ್ಸೂರಿ, ನಗರಾಧ್ಯಕ್ಷ ಖಾಜಾ ಮಿರನ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಚನ್ನಪ್ಪ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಸಿದ್ದನಗೌಡ, ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಬಿ. ನಾಗರಾಜ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
ಇಂದು ಪ್ರಚಾರ ಸಭೆ
ಬಳ್ಳಾರಿ: ಸ್ಥಳೀಯ ಬಸವೇಶ್ವರ ನಗರದ ಬಸವ ಮಂಟಪದಲ್ಲಿ ಶರಣ ಮೇಳ ಪ್ರಚಾರದ ಅಂಗವಾಗಿ ನ. 17ಮತ್ತು 18ರಂದು ಸಂಜೆ 6.30ಕ್ಕೆ ಸಭೆ ಕರೆಯಲಾಗಿದೆ. ಜನವರಿ 11ರಿಂದ 15ರ ವರೆಗೆ ಕೂಡಲಸಂಗಮದಲ್ಲಿ ಜರುಗಲಿರುವ ಶರಣ ಮೇಳದ ನಿಮಿತ್ತ ಈ ಪ್ರಚಾರ ಸಭೆ ಕರೆಯಲಾಗಿದ್ದು, ಗಂಗಾಮಾತಾಜಿ ಸಾನ್ನಿಧ್ಯ ವಹಿಸುವರು. ಧ್ವಜವಂದನೆ, ಗುರುಪೂಜೆ, ಪ್ರಾರ್ಥನೆ, ಧ್ಯಾನ, ವಚನ ಗಾಯನಗಳ ನಂತರ ಗಂಗಾಮಾತಾಜಿ ಪ್ರವಚನ ನೀಡಲಿದ್ದಾರೆ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ. ರವಿಶಂಕರ್ ತಿಳಿಸಿದ್ದಾರೆ.
ಇಂದು ಸೌರಭ ಕಾರ್ಯಕ್ರಮ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನ. 17ರಂದು ಮೋಕಾ ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಸಂಜೆ 7 ಗಂಟೆಗೆ ಯುವ ಸೌರಭ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ಸಿ.  ಪೂಜಾ ಅವರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಹೊಸಪೇಟೆ: ಇಂದು ಕವಿಗೋಷ್ಠಿ
ಹೊಸಪೇಟೆ: ಸಮುದಾಯ ಸಾಂಸ್ಕೃತಿಕ ಸಂಘಟನೆಯ ತಾಲೂಕು ಸಮಿತಿಯಿಂದ ಕನಕದಾಸರ ಜಯಂತಿ ನಿಮಿತ್ತ ವಿಚಾರ ಸಂಕಿರಣ, ಕವಿಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ನಗರದ ಅಮೃತ ರೆಸಿಡೆನ್ಸಿ ಸಭಾಂಗಣದಲ್ಲಿ ನ. 17ರಂದು ಸಂಜೆ 4.30ಕ್ಕೆ ಆಯೋಜಿಸಲಾಗಿದೆ. ಬಿಇಒ ಪಿ. ಸುನಂದಾ ಉದ್ಘಾಟಿಸುವರು. ಸಮುದಾಯದ ತಾಲೂಕು ಅಧ್ಯಕ್ಷ ಕೆ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕಿ ಡಾ. ಅನ್ನಪೂರ್ಣಾ ಗೋಸ್ಬಾಳ ಉಪನ್ಯಾಸ ನೀಡುವರು. ಅನಂತರ ಕವಿಗೋಷ್ಠಿ, ಕನಕದಾಸರ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ
ಹಗರಿಬೊಮ್ಮನಹಳ್ಳಿ: ಬೆಂಗಳೂರಿನಲ್ಲಿ ನ. 17ರಂದು ನಡೆಯುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಅಭಿಯಾನವನ್ನು ಬೆಂಬಲಿಸಿ ಶುಕ್ರವಾರ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮಾಜಿ ಶಾಸಕ, ಪಕ್ಷದ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ ನೇತೃತ್ವದಲ್ಲಿ ಬೈಕ್‌ರ್ಯಾಲಿ ನಡೆಸಿದರು.
ಕಿರುಕುಳ ನೀಡಿ ಮಹಿಳೆ ಕೊಲೆ
ಬಳ್ಳಾರಿ: ತಾಲೂಕಿನ ಜಾನೆಕುಂಟೆ ಗ್ರಾಮದಲ್ಲಿ ಮಹಿಳೆಯೋರ್ವಳಿಗೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂಬ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಮಹಿಳೆಯನ್ನು ಜಾನೆಕುಂಟೆ ಗ್ರಾಮದ ದುರ್ಗಮ್ಮ (25) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಮನೆಯವರು ಕಿರುಕುಳ ನೀಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ದುರ್ಗಮ್ಮಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲೇ ಮಧ್ಯಾಹ್ನ 3ರ ಸುಮಾರಿಗೆ ಸಾವನ್ನಪ್ಪಿದ್ದಾಳೆ. ಅತ್ತೆ ದುರ್ಗಮ್ಮ, ಮಾವ ದುರ್ಗಪ್ಪ, ಪತಿ ಶೇಖರಪ್ಪ ವಿರುದ್ಧ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಗ್ರಾಮೀಣ ಠಾಣಾ ಸಿಪಿಐ ಉಮೇಶ್ ನಾಯ್ಕ ಭೇಟಿ ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement